ಎಂಎಲ್ ಸಿ ರವಿಕುಮಾರ್ ಅವರನ್ನು ಬಿಜೆಪಿ ವಜಾ ಮಾಡಲಿ: ಜ್ಯೋತಿ ಪಾಟೀಲ್‌

ಎಂಎಲ್ ಸಿ ರವಿಕುಮಾರ್ ಅವರನ್ನು ಬಿಜೆಪಿ ವಜಾ ಮಾಡಲಿ: ಜ್ಯೋತಿ ಪಾಟೀಲ್‌ Let BJP sack MLC Ravikumar: Jyoti Patil

ಕಾರವಾರ(ಶಿರಸಿ) 03 : ಕಲಬುರ್ಗಿ ಜಿಲ್ಲಾಧಿಕಾರಿ ಅವರ ಬಗ್ಗೆ ಅವಮಾನದ ಹೇಳಿಕೆ ನೀಡಿ, ಬಳಿಕ ಕ್ಷಮಾಯಾಚಿಸಿದ್ದ ಎಂ.ಎಲ್‌. ಸಿ. ರವಿಕುಮಾರ್ , ಇದೀಗ ರಾಜ್ಯದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ಬಗ್ಗೆ ಅವಮಾನದ ಹೇಳಿಕೆ ನೀಡಿದ್ದಾರೆ. 

ರವಿಕುಮಾರ್ ಸಂವಿಧಾನ ವಿರೋಧಿ ವರ್ತನೆ ತೋರುತ್ತಿದ್ದು, ಮಹಿಳಾ ವಿರೋಧಿ ಸಹ ಆಗಿದ್ದಾರೆ. ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿ , ತಕ್ಷಣ ಬಂಧಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ಕಾರ್ಯದರ್ಶಿ ಜ್ಯೋತಿ ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರುಮಹಿಳೆಯರ ಪರವಾಗಿ , ಸದಾ ಸಂಸ್ಕಾರ,ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು , ತಮ್ಮ ಪಕ್ಷದ ನಾಯಕ ರಾಜ್ಯ ಮುಖ್ಯ ಕಾರ್ಯದರ್ಶಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಬಗ್ಗೆ ಮೌನ ವಹಿಸಿರುವದು ಅಚ್ಚರಿ ತಂದಿದೆ.ಬೆಳಗಾವಿಯಲ್ಲಿ ವಿಧಾನಪರಿಷತ ಒಳಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬಗ್ಗೆ ಅಪಮಾನದ ಮಾತನ್ನು ಎಂಎಲ್ ಸಿ ಸಿ.ಟಿ.ರವಿ ಆಡಿದರೂ, ಬಿಜೆಪಿ ನಾಯಕರು ಅವರ ವಿರುದ್ಧ ಕ್ರಮ ಕೈಗೊಳ್ಳದೇ ಬೆಂಬಲಿಸಿದರು.ವಿಧಾನ ಪರಿಷತ್ ಸದಸ್ಯ ರವಿಕುಮಾರರು ಕಲಬುರ್ಗಿ ಜಿಲ್ಲಾಧಿಕಾರಿ ಕುರಿತು ,'ನೀವು ಪಾಕಿಸ್ತಾನದಿಂದ ಬಂದಿದ್ದಾರಾ' ಎಂದು ಅಘಾತಕಾರಿ,ಅಪಮಾನದ ಹೇಳಿಕೆ ನೀಡಿದರು. 

ಈ ಸಂಗತಿ ಕೋರ್ಟ ಮೆಟ್ಟಿಲು ಹತ್ತುತ್ತಿದ್ದಂತೆ , ಕ್ಷಮೆ ಕೇಳಿದರು. ಈಗ ಮತ್ತೆ ಮುಖ್ಯ ಕಾರ್ಯದರ್ಶಿ ಬಗ್ಗೆ ನಾಲಿಗೆ ಹರಿ ಬಿಟ್ಟಿದ್ದು, ತಮ್ಮ ಚಾಳಿವಮುಂದುವರಿಸಿದ್ದಾರೆ. ರಾಜ್ಯದ ಆಡಳಿತ ಮುಖ್ಯಸ್ಥೆ, ಪ್ರಾಮಾಣಿಕ ಅಧಿಕಾರಿ ಶಾಲಿನಿ ರಜನೀಶಬಗ್ಗೆ ಅವಹೇಳನಕಾರಿ ಮಾತು ಆಡಿರುವದು ಖಂಡನೀಯ ಎಂದು ಜ್ಯೋತಿ ಪಾಟೀಲ್ ಟೀಕಿಸಿದ್ದಾರೆ. 

ಎಂ ಎಲ್ ಸಿ ರವಿಕುಮಾರ್ ಅವರು ಉದ್ದೇಶಪೂರ್ವಕವಾಗಿ ಉನ್ನತ ಸ್ಥಾನದಲ್ಲಿರುವ ಮಹಿಳೆಯರ ಟೀಕಿಸುವ ಅಜೆಂಡಾ ಹೊಂದಿದ್ದಾರೆ ಎಂಬ ಸಂದೇಹ ಬರುತ್ತಿದೆ.ರಾಜ್ಯ ಸರಕಾರವು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಬಿಗಿಕ್ರಮ ಕೈಗೊಳ್ಳಬೇಕು.ರಾಜ್ಯದ ಸಮಸ್ತ ಮಹಿಳೆಯರು ಇದನ್ನುಖಂಡಿಸಬೇಕು. ಇಂತಹ ಮಹಿಳಾ ವಿರೋಧಿ ಜನನಾಯಕರಿಗೆ ಪ್ರತಿ ಊರಲ್ಲಿ ಘೆರಾವು ಹಾಕಬೇಕು ಎಂದು ಪಾಟೀಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿದ್ದಾರೆ. ಬಿಜೆಪಿಗೆ ಮಹಿಳಾ ಪರ ಕಾಳಜಿ ಇದ್ದರೆ ರವಿಕುಮಾರ್ ಅವರನ್ನು ಎಂಎಲ್ ಸಿ ಸ್ಥಾನ, ದಿಂದ ವಜಾ ಮಾಡಿ , ಬಿಜೆಪಿ ನಿಲುವು ಸ್ಪಷ್ಟಪಡಿಸಲಿ ಎಂದಿದ್ದಾರೆ....