ಲೋಕದರ್ಶನ ವರದಿ
ಕುಕನೂರ : ನಮ್ಮ ನಡುವಿನ ಬಹುತೇಕರು ಹಣ, ಸಂಪತ್ತು, ಸ್ಥಾನಮಾನ, ಅಧಿಕಾರ, ಜನಪ್ರೀಯತೆ ಇವನ್ನೇ ಜೀವನದ ನೆಮ್ಮದಿಯ ಶಿಖರಗಳು ಎಂದು ಭಾವಿಸಿದ್ದಾರೆ ಎಂದು ಚಳಗೇರಿ ಹಿರೇಮಠದ ಪೂಜ್ಯ ಷ ಬ್ರ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಚಳಗೇರಿ ಹಿರೇಮಠದ ಲಿಂ ಪೂಜ್ಯರ ದಿವ್ಯ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ ಮನುಷ್ಯ ಜೀವಿ ಬಿಟ್ಟರೆ ಉಳಿದ ಎಲ್ಲ ಜೀವಿಗಳು ಜೀವಿಸಿರುತ್ತವೆಯೇ ಹೊರತು ಬದುಕುವುದಿಲ್ಲ. ನಿಜವಾದ ಬದುಕುವ ಕಲೆ ಗೊತ್ತೀರುವುದು ಮಾನವ ಜೀವಿಗೆ ಮಾತ್ರ ಹಿಗಾಗಿ ಮನುಷ್ಯನಾಗಿ ಹುಟ್ಟಿದ ಮೇಲೆ ಉತ್ತಮ ಬದುಕು ಕಂಡುಕೊಳ್ಳಬೇಕು ಎಂದರು.
ಪೂಜ್ಯ ಮಹಾದೇವ ದೇವರು ಮಾತನಾಡಿ ಈ ನಾಡು ಕಂಡ ಹಲವಾರು ಪೂಜ್ಯರಲ್ಲಿ ಚಳಗೇರಿ ಹಿರೇಮಠ ಲಿಂ ವಿರುಪಾಕ್ಷಲಿಂಗ ಬದುಕು ಇಂದಿನ ನಮ್ಮಂತ ಹಲವಾರು ಯುವ ಪೂಜ್ಯರಿಗೆ ಮಾರ್ಗದರ್ಶನವಾಗಿದೆ, ಅವರಲ್ಲಿ ಇದ್ದ ಸರಳತೆ, ಎಲ್ಲಾರನ್ನ ಸಮಾನವಾಗಿ ಕಾಣುವ ಗುಣ, ಅವರನ್ನ ಈ ನಾಡಿನ ಜನರು ನಡೆದಾಡುವ ದೇವರೇ ಅವರು ಎಂದು ಪೂಜಿಸುವುದನ್ನ ಕಂಡಾಗ ಅವರು ಈ ನಾಡಿಗೆ ನೀಡಿದ ಕೊಡುಗೆ ಗೊತ್ತಾಗುತ್ತದೆ, ಪೂಜ್ಯರು ಶೈಕ್ಷಣಿಕವಾಗಿ ಸಾಮಾಜಿಕವಾಗಿ, ಧಾರ್ಮಿಕವಾಗಿ ಸಾಕಾಷ್ಟು ಕೊಡುಗೆ ನೀಡಿದ್ದಾರೆ ಅಂಥವರ ಸ್ಮರಣೆ ಮಾಡಿದಾಗ ಪುಣ್ಯ ಲಭಿಸಲು ಸಾದ್ಯ ಎಂದರು.
ಜ್ಯೋತಿ ಯಾತ್ರೆಯನ್ನ ಗುದ್ನಪ್ಪಮಠದ ಭಕ್ತರು ಸ್ವಾಗತಿಸಿಕೊಂಡು ಅವರಿಗೆ ಗೌರವ ನೀಡಿ ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠಕ್ಕೆ ಭಜನೆ ಮೂಲಕ ಕಳಿಸಿದರು. ದೇವೆಂದ್ರಪುರಿ ನಾಗಸಾದುಗಳು ಹರಿಯಾಣ, ತಾಪಂ ಮಾಜಿ ಉಪಾಧ್ಯಕ್ಷ ವಾರದ ಶೇಖರಪ್ಪ, ಕುಕನೂರ ದಳಪತಿ ವೀರಯ್ಯ ತೋಂಟದಾರ್ಯಮಠ, ಗದಿಗೆಪ್ಪ ಪವಾಡಶೆಟ್ಟಿ, ಶಿವಲಿಂಗಯ್ಯ ಶಿರೂರಮಠ, ಜಗದೀಶಯ್ಯ ಕಳ್ಳಿಮಠ, ಬಸಪ್ಪ ಮಾಸ್ತರ, ಶೇಖರಪ್ಪ ಶಿರೂರ, ರುದ್ರೇಶ ಆರಾಳ, ಚಂದ್ರಶೇಖರ ವಜ್ರಬಂಡಿ, ಚನ್ನಯ್ಯ ಚಳಿಗೇರಿ, ಶಿವಣ್ಣ ಸರಗಣಚಾರಿ, ಮಲ್ಲಯ್ಯ ಮುಳಗುಂದ, ಯುವಕರು ಮತ್ತು ಇತರರು ಇದ್ದರು.