ಹೈದರಬಾದ್, ಮೇ14,ನಗರದ ಹೊರವಲಯದಲ್ಲಿ ಕಾಣಿಸಿಕೊಂಡ ಚಿರತೆ ಹಿಡಿಯಲು ಕಾರ್ಯಾಚರಣೆ ಮುಂದುವರೆದಿದೆ. ಗುರುವಾರ ಹೊರವಲಯದ ಮೈಲಾರ್ ದೇವ್ ಪಲ್ಲಿಯ ರಸ್ತೆಯ ಮೇಲೆ ಮಲಗಿದ್ದ ಚಿರತೆ ಕಂಡುಬಂದಿತ್ತು. ಚಿರತೆ ಕಾಲಿಗೆ ಗಾಯವಾಗಿತ್ತು. ಸುದ್ದಿ ತಿಳಿದಂತೆ ಜನರು ಚಿರತೆ ನೋಡಲು ಗುಂಪು ಸೇರಿದ್ದಾರೆ. ಗಾಬರಿಗೊಂಡ ಚಿರತೆ ಸ್ಥಳದಿಂದ ಕಾಲ್ಕಿತ್ತು ರಸ್ತೆ ದಾಟಿ ಹತ್ತಿರದ ಮದುವೆ ಮಂಟಪದಲ್ಲಿ ಸೇರಿದೆ. ರಸ್ತೆ ದಾಟುತ್ತಿದ್ದಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆಯನ್ನು ವಾಹನ ಸಂಚಾರಕ್ಕೆ ಬಂದ್ ಮಾಡಿ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.ನೆಹರು ಜೈವಿಕ ಉದ್ಯಾನವನದ ಸಿಬ್ಬಂದಿಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಾಣಿಗೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಸೆರೆ ಹಿಡಿದ ನಂತರ ಚಿರತೆಯನ್ನು ಚಿಕಿತ್ಸೆಗಾಗಿ ಪ್ರಾಣಿಸಂಗ್ರಹಾಲಯಕ್ಕೆ ಸಾಗಿಸಲಾಗುವುದು.