ಶಾಸಕರ ಪ್ರಯತ್ನ: ಕಾಲುವೆಗಳಿಗೆ ನೀರು, ರೈತರಿಗೆ ಅನುಕೂಲ

ಲೋಕದರ್ಶನ ವರದಿ

ಕಾಗವಾಡ 23: ಕಾಗವಾಡ ಮತಕ್ಷೇತ್ರ ವ್ಯಾಪ್ತಿಯ ಐನಾಪೂರ, ಮಂಗಸೂಳಿ, ಕಾಗವಾಡ, ನವಲಿಹಾಳ, ಮದಬಾವಿ, ಸಿದ್ದೆವಾಡಿ ಗ್ರಾಮಗಳ ಸಾವಿರಾರು ರೈತರು ಹಿಂಗಾರೂ ಹಂಗಾಮಿನಲ್ಲಿ ಭಿತ್ತನೆ ಮಾಡಿದ ಜೋಳ, ಗೋಧಿ ಇನ್ನೀತರ ಬೆಳೆಗಳಿಗೆ ನೀರಿನ ಕೊರತೆ ಕಂಡು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ರಾಜ್ಯ ಸರ್ಕಾರದ ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಐನಾಪೂರ ಎತ್ತ ನೀರಾವರಿ, ಕರಿಮಸುತಿ ಎತ್ತ ನೀರಾವರಿ ಕಾಲುವೆಗಳ ಮುಖಾಂತರ ಮತ್ತೆ ನೀರು ಹರಿಸಲು ಪ್ರಾರಂಭಿಸಿದ್ದರಿಂದ ರೈತರಲ್ಲಿ ಸಂತಸ ಮೂಡಿಸಿದೆ. ಬುಧವಾರರಿಂದ ಕಾಲುವೆಗಳಿಂದ ನೀರು ಹರಿಯಲು ಪ್ರಾರಂಭಿಸಿದೆ. ಇದರಿಂದಎಲ್ಲ ಗ್ರಾಮಗಳ ರೈತರ ಬೆಳೆಗಳಿಗೆ ನೀರ ಪೂರೈಸುತ್ತಿದ್ದಾರೆ.ಇದರಿಂದ ಸಾವಿರಾರು ರೈತರಿಗೆ ವಿಶೇಷ ಸಹಾಯವಾಗಿದೆ.

ಕಳೇದ ಕೆಲ ವರ್ಷಗಳಿಂದ ಐನಾಪೂರ ಮತ್ತು ಕರಿಮಸುತಿ ಎತ್ತ ನೀರಾವರಿ ಯೋಜನೆ ಪ್ರಾರಂಭಿಸಿದ್ದರೂ ಮಳೆಗಾಲದಲ್ಲಿ ಮಾತ್ರ ಕಾಲುವೆಗಳ ಮುಖಾಂತರ ನೀರು ಹರಿಸಲಾಗುತ್ತಿತ್ತು. ಆದರೆ, ಜನೇವರಿ ತಿಂಗಳಿನಲ್ಲಿ ನೀರು ಹರಿಸಿದ್ದು ಇದೇ ಪ್ರಥಮ ಬಾರಿಯಾಗಿದೆ. ಇದಕ್ಕೆ ಶಾಸಕ ಶ್ರೀಮಂತ ಪಾಟೀಲ ಇವರ ವಿಶೇಷ ಪ್ರಯತ್ನ ಫಲಿಸಿದೆ.ಇದರಿಂದ ರೈತರು ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಕರಿಮಸುತಿ ಎತ್ತ ನೀರಾವರಿ ಯೋಜನೆ ಮುಖಾಂತರ ಕಾಗವಾಡ ಕ್ಷೇತ್ರದ ಪಾರ್ಥನಹಳ್ಳಿ, ಗುಂಡೆವಾಡಿ, ಅಬ್ಬಿಹಾಳ, ಮಾಯನಟ್ಟಿ ಈ ಗ್ರಾಮಗಳ ರೈತರಿಗೆ ನೀರು ಕಾಲುವೆಗಳ ಮುಖಾಂತರ ಹರಿಯಲು ಪ್ರಾರಂಭಿಸಿದೆ. ಇದರಿಂದ ಕೆಲ ರೈತರು ಬರದ ನಾಡಿನಲ್ಲಿ ಭಗಿರಥ ಬಂದಂತೆ. ರೈತರ ಕಣ್ಮಣಿ ಶಾಸಕ ಶ್ರೀಮಂತ ಪಾಟೀಲ ಎಂದು ಅಭಿಮಾನದಿಂದ ಹೇಳುತ್ತಿದ್ದಾರೆ.

ಶಾಸಕರ ಬೆಳಗಾವಿಯಲ್ಲಿ ಸಭೆ:

ಶಾಸಕ ಶ್ರೀಮಂತ ಪಾಟೀಲರು ಬೆಳಗಾವಿಯಲ್ಲಿ ಕರ್ನಾಟಕ ನೀರಾವರಿ ನಿಗಮ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಸಭೆ ಕರೆದು ಖಿಳೆಗಾಂವ ಬಸವೇಶ್ವರ ಎತ್ತ ನೀರಾವರಿ ಯೋಜನೆ ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡುವದೊಂದಿಗೆ ಈಗ ಕೆನಾಲ್ ಮುಖಾಂತರ ಹರಿಸುವ ನೀರುಇನ್ನೂ ಕೆಲ ದಿನಗಳ ವರೆಗೆಹರಿಸಿರಿ ಎಂದು ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಕೆ.ಕೆ.ಜಾಲಿಬೇರಿ, ಅರವಿಂದ ಕನಗಲೆ, ಅಥಣಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಅರುಣ ಯಲಗುದ್ರಿ ಇವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಾದ ಪ್ರವೀಣ ಹಂಚಿಬಟ್ಟಿ, ಪ್ರಶಾಂತ ಪೋತದಾರ, ಕೆ.ಎಂ.ಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ, ರೈತ ಮುಖಂಡ ದಾದಾ ಪಾಟೀಲ, ಸೇರಿದಂತ ಅನೇಕರು ಇದ್ದರು.