ಹಾವೇರಿ : ನಗರದ ಮಾಬುಸ್ಮಾನಿ ದಗರ್ಾದಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ಜನ ಜಾಗೃತಿ ಅಭಿಯಾನಕ್ಕೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಶಾಸಕ ನೆಹರು ಓಲೇಕಾರ ಪೌರತ್ವ ತಿದ್ದುಪಡಿ ಕಾಯ್ದೆ 2019 ಮುಸ್ಲಿಂ ವಿರೋಧಿ ನೀತಿಯನ್ನು ಒಳಗೊಂಡಿದೆ ಎಂದು ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಗಮನ ಕೊಡದೆ,ನಾವೆಲ್ಲರೂ ಒಂದು ಎನ್ನುವ ಮೂಲ ಮಂತ್ರದಡಿ ಸಮಾಜದಲ್ಲಿ ಸಾಮರಸ್ಯ ಹಾಗೂ ಸಹಬಾಳ್ವೆಯಿಂದ ಬದುಕುವ ಮೂಲಕ ಪೌರತ್ವ ಕಾಯ್ದೆಗೆ ಬೆಂಬಲ ನೀಡಿ ಎಂದು ಮುಸ್ಲಿಂ ಸಮಾಜದ ಬಾಂಧವರ ಮನೆ ಮನೆಗೆ ಹೋಗಿ ಕರಪತ್ರ ನೀಡಿ ಪೌರತ್ವ ಕಾಯ್ದೆ ಬಗ್ಗೆ ಜನ ಜಾಗೃತಿಗಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಪಿ ಚಾವಡಿ.ನಜೀರ್ ಹುಸೇನ್ ನದಾಫ್,ಬಾಬುಸಾಬ ಮೋಮಿನಗಾರ,ಜಗದೀಶ ಮಲಗೋಡ,ಪ್ರಶಾಂತ ಭಾಂಗ್ರೆ,ಬಸವರಾಜ ಕಳಸೂರ,ಶ್ರೀಕಾಂತ ಪೂಜಾರ,ರತ್ನಾ ಭಿಮಕ್ಕನವರ,ಮಂಜುನಾಥ ಮಡಿವಾಳರ,ಶ್ರೀಧರ ಆನವಟ್ಟಿ,ನಾಗರಾಜ ಹಿರೇಮಠ ಅನೇಕರಿದ್ದರು.