ಕೊರೊನಾ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಶಾಸಕ ವಿರೂಪಾಕ್ಷಪ್ಪ ಚಾಲನೆ

ಲೋಕದರ್ಶನವರದಿ

ಬ್ಯಾಡಗಿ೦೪: ಕೊರೊನಾ ವೈರಸ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ವಹಿಸುವಂತೆ ಆರೋಗ್ಯ, ಪುರಸಭೆ, ಕಂದಾಯ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಿರುವ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಸಾರ್ವಜನಿಕರು ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತಮ್ಮ ಆರೋಗ್ಯದ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡಿದರು. 

 ಪಟ್ಟಣದಲ್ಲಿ ಶುಕ್ರವಾರ ತಾಲೂಕಾ ಆಡಳಿತ ಹಾಗೂ ಪೊಲೀಸ್ ಠಾಣೆಯ ವತಿಯಿಂದ "ಮಾಸ್ಕ್ ಧರಿಸಿ. ಸುರಕ್ಷಿತವಾಗಿರಿ, ಭಯ ಬೇಡ. ಎಚ್ಚರವಿರಲಿ" ಎಂಬ ಘೋಷಣೆಯಡಿ, ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಾಥಾದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ಮಾಸ್ಕ್ ವಿತರಿಸುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ನಂತರ ಮಾತನಾಡಿದ ಅವರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ರಕ್ಷಣೆಗೆ  ಮುಂದಾಗಬೇಕು ಎಂದರಲ್ಲದೇ ಕೇಂದ್ರ ಸಕರ್ಾರದಿಂದ  ಬಿಡುಗಡೆಗೊಂಡಿರುವ "ಆರೋಗ್ಯ ಸೇತು" ಎನ್ನುವ ಆ್ಯಪನ್ನ ಬಳಸಿ ಸಾರ್ವಜನಿಕರು  ತಮ್ಮ ಆರೋಗ್ಯ ಸ್ಥಿತಿಯನ್ನು ತಿಳಿಯಬಹುದಾಗಿದೆ ಎಂದು ಹೇಳಿದರು. 

ತಹಶೀಲ್ದಾರ ಶರಣಮ್ಮ ಕಾರಿ ಮಾತನಾಡಿ, ಕೊರೋನಾ ಕುರಿತಂತೆ ಮನೆಗೆ ಭೇಟಿ ಆರೋಗ್ಯ ತಪಾಸಣೆ ಮಾಡಲು ಆಗಮಿಸುವ ಸಿಬ್ಬಂದಿಗಳೊಂದಿಗೆ ಸಾಮಾಜಿಕ ಅಂತರದೊಂದಿಗೆ ಸರಿಯಾಗಿ ವತರ್ಿಸಿ ಮಾಹಿತಿ ನೀಡುವಂತೆ ಮನವಿ ಮಾಡಿದರು. 

  ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಶಂಕ್ರಪ್ಪ ಮಾತನವರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಡಿವೈಎಸ್.ಪಿ ಸಂತೋಷಕುಮಾರ, ಟಿಇಓ ಜಯಕುಮಾರ, ಸಿಪಿಐ ಭಾಗ್ಯವತಿ ಬಂತಿ, ಪಿಎಸ್.ಐ ಮಹಾಂತೇಶ್, ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಬಿಇಒ ರುದ್ರಮುನಿ, ಡಾ. ಬಿ. ಆರ್. ಲಮಾಣಿ, ರಾಮಲಿಂಗಪ್ಪ ಅರಳಿಗುಪ್ಪಿ, ಪುಂಡಲೀಕ ಮಾನವರೆ ಸೇರಿದಂತೆ ಇನ್ನಿತರರು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.