ಫಲಿತಾಂಶ ಸುಧಾರಣೆಗೆ ಉಪನ್ಯಾಸಕರು ಕ್ರಮ ಕೈಗೊಳ್ಳಿ: ಡಾ.ಸಿ. ಕೆ. ಹೊಸಮನಿ
Lecturers should take action to improve results: Dr. C. K. Hosamani
ದೇವರಹಿಪ್ಪರಗಿ 19: ವಿದ್ಯಾರ್ಥಿಗಳ ಕಲಿಕಾ ಸುಧಾರಣೆ ಮತ್ತು ಪರೀಕ್ಷೆಗಳ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಉಪನ್ಯಾಸಕರು ಎಲ್ಲ ರೀತಿಯ ಶೈಕ್ಷಣಿಕ ಕ್ರಮ ತೆಗೆದುಕೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜಯಪುರದ ಉಪನಿರ್ದೇಶಕ ಡಾ. ಸಿ. ಕೆ. ಹೊಸಮನಿ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ, ಎ. ಬಿ. ಸಾಲಕ್ಕಿ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಘ ಹಮ್ಮಿಕೊಂಡ ಶಿಕ್ಷಣಶಾಸ್ತ್ರ ಹಾಗೂ ಭೂಗೋಳಶಾಸ್ತ್ರ ವಿಷಯಗಳ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆಗಳು ಮುಂದಿನ ದಿನಮಾನಗಳಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ಒಳಗೊಂಡಿವೆ ಹೀಗಾಗಿ ಉಪನ್ಯಾಸಕರು ಫಲಿತಾಂಶ ಸುಧಾರಣೆಗೆ ತಮ್ಮ ತಮ್ಮ ವಿಷಯಗಳ ಮೇಲೆ ಮಕ್ಕಳಿಗೆ ಉಪಯುಕ್ತ ಹಾಗೂ ಬಹುಮುಖ್ಯ ಅಂಶಗಳ ಬಗ್ಗೆ ಚರ್ಚಿಸಬೇಕು ಪ್ರತಿ ವಿದ್ಯಾರ್ಥಿಗಳ ಕಡೆಗೆ ಉಪನ್ಯಾಸಕರು ಗಮನ ಹರಿಸಬೇಕು. ವಿಷಯಗಳ ಬಗ್ಗೆ ಇರುವ ಪಾಸಿಂಗ್ ಪ್ಯಾಕೇಜ ತಯಾರಿಸಿ ಮಕ್ಕಳಿಗೆ ನೀಡಬೇಕು ವಿಜಯಪುರ ಜಿಲ್ಲೆಯ ಮುಂದಿನ ಫಲಿತಾಂಶ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮೂಡಿಬರುವಂತೆ ಪ್ರಯತ್ನಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ ಎ. ಬಿ. ಸಾಲಕ್ಕಿ ಕಾಲೇಜಿನ ಪ್ರಾಚಾರ್ಯ ವಿ.ಜಿ.ಹೂನಳ್ಳಿ ಅವರು ಮಾತನಾಡಿ ಪರೀಕ್ಷೆಗಳು ವಿಭಿನ್ನವಾಗಿ ಬರುವದರಿಂದ ಕಾರ್ಯಾಗಾರಗಳು ಹೆಚ್ಚು ಉಪಯುಕ್ತಗೊಂಡಿವೆ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ಉಪನ್ಯಾಸಕರು ತಮ್ಮ ತಮ್ಮ ಕಾಲೇಜುಗಳ ಮಕ್ಕಳಿಗೆ ನೀಡಬೇಕು ಎಂದರು.
ಜಗದೀಶ ಗುಲಗಂಜಿ ಮತ್ತು ನರಸಿಂಹ ಅವಧಾನಿ ಅವರು ತಯಾರಿಸಿದ ಪಾಸಿಂಗ್ ಪ್ಯಾಕೇಜನ್ನು ಉದ್ಘಾಟಿಸಲಾಯಿತು. ಸಮಾರಂಭದ ಸಾನಿಧ್ಯವನ್ನು ಸ್ಥಳೀಯ ಸದಯ್ಯನಮಠದ ಷ.ಬ್ರ.ಶ್ರೀ ವೀರಗಂಗಾಧರ ಮಹಾಸ್ವಾಮಿಗಳು ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಕರ್ನಾಟಕ ರಾಜ್ಯ ಶಿಕ್ಷಣಶಾಸ್ತ್ರ ವಿಷಯ ಸಂಘದ ಅಧ್ಯಕ್ಷ ಎ. ಆರ್. ಹೆಗ್ಗನದೊಡ್ಡಿ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಎಸ್. ಕೆ. ಬಜಂತ್ರಿ, ರಾಜು ಪಟ್ಟಣದ, ಮಲ್ಲಿಕಾರ್ಜುನ ಅವಟಿ ಇದ್ದರು.ಶಿಕ್ಷಣಶಾಸ್ತ್ರ ಹಾಗೂ ಭೂಗೋಳಶಾಸ್ತ್ರದ ಉಪನ್ಯಾಸಕರು ಇದ್ದರು. ಉಪನ್ಯಾಸಕಿ ವಿ.ಆರ್. ಹಿರೇಮಠ ನಿರೂಪಿಸಿದರು. ಉಪನ್ಯಾಸಕ ಕೆ. ವಿ. ಒಡೆಯರ ಸ್ವಾಗತಿಸಿದರು ಹಾಗೂ ನವೀನ ಕುಮಾರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 