ಅಂಗಡಿ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿಯರು ಭಾಗಿ

Lecturers from Angadi Technical College participated at the Women in Space Leadership Program at IIT

ಐಐಟಿ ಇಂದೋರ್‌ನಲ್ಲಿನ ವುಮೆನ್ ಇನ್ ಸ್ಪೇಸ್ ಲೀಡರ್‌ಶಿಪ್ ಪ್ರೋಗ್ರಾಂನಲ್ಲಿ  

ಬೆಳಗಾವಿ 11: ಐಐಟಿ ಇಂದೋರ್‌ನಲ್ಲಿನ ಇತ್ತೀಚೆಗೆ ನಡೆದ ವುಮೆನ್ ಇನ್ ಸ್ಪೇಸ್ ಲೀಡರ್‌ಶಿಪ್ ಪ್ರೋಗ್ರಾಂನಲ್ಲಿ ಬೆಳಗಾವಿ ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಉಪನ್ಯಾಸಕಿಯರಾದ ಡಾ. ಧನಶ್ರೀ ಕುಲಕರ್ಣಿ ಮತ್ತು ಡಾ. ಪೂಜಾ ಅನಗೋಳಕರ ಇವರು ಭಾಗವಹಿಸಿದ್ದರು.  

ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್‌ ವಿಭಾಗದ ಮುಖ್ಯಸ್ಥೆ ಡಾ. ಧನಶ್ರೀ ಕುಲಕರ್ಣಿ ಮತ್ತು ಅಟೋಮೇಷನ್ ವಿಭಾಗದ ಮುಖ್ಯಸ್ಥೆ ಡಾ. ಪೂಜಾ ಅನಗೋಳಕರ ಅವರು 2025 ಫೆಬ್ರವರಿ 18ರಿಂದ 21ರವರೆಗೆ ಐಐಟಿ, ಇಂದೋರ್‌ನಲ್ಲಿ ನಡೆದ ವುಮೆನ್ ಇನ್ ಸ್ಪೇಸ್ ಮತ್ತು ಅಲೈಡ್ ಸೈನ್ಸಸ್ ಲೀಡರ್‌ಶಿಪ್ ಪ್ರೋಗ್ರಾಂ(ಘಖಐಕ)ನಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಘಋಇ-ಏಋಂಓ ವಿಭಾಗ ಮತ್ತು ಬ್ರಿಟಿಷ್ ಕೌನ್ಸಿಲ್‌ನ ಸಹಯೋಗದಲ್ಲಿ ಗಏಋಖಋ ಅಡಿಯಲ್ಲಿ ಆಯೋಜಿಸಲಾದ ಈ ಕಾರ್ಯಾಗಾರವು ಮಹಿಳೆಯರನ್ನು ಬಾಹ್ಯಾಕಾಶ ವಿಜ್ಞಾನಗಳಲ್ಲಿ ಸಶಕ್ತಿಯೊಳಿಸುವ ಉದ್ದೇಶ ಹೊಂದಿತ್ತು. ಅವರ ಭಾಗವಹಿಸುವಿಕೆ ನಾವಿನ್ಯತೆ ಮತ್ತು ನಾಯಕತ್ವದ ತತ್ಪರತೆಯನ್ನು ಪ್ರೇರೇಪಿಸುತ್ತದೆ. ಈ ಕಾರ್ಯಕ್ರಮದಲ್ಲಿ ವಿಷಯದ ಕುರಿತು ನುರಿತ ಅನುಭವ ಹೊಂದಿದವರ ಸಂದೇಶಗಳು, ನೆಟ್‌ವರ್ಕಿಂಗ್, ಮತ್ತು ಮಹಿಳೆಯರ ಬಾಹ್ಯಾಕಾಶ ಮತ್ತು ಸಂಬಂಧಿತ ವಿಜ್ಞಾನಗಳಲ್ಲಿ ಪಾತ್ರವನ್ನು ಉತ್ತೇಜಿಸುವ ಕುರಿತು ಜ್ಞಾನ ಹಂಚಿಕೊಳ್ಳುವ ವಿಭಾಗಗಳನ್ನು ಒಳಗೊಂಡಿದ್ದವು.