ಗದಗ: ಜಿಲ್ಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಮಾಡಿಸುವಾಗ ಗದಗ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧೀಜಿ ಭೇಟಿ ಕೊಟ್ಟ ಸ್ಥಳಗಳ ಪಟ್ಟಿ ಮಾಡಿ ಅಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬೇಕು. ಮಹಾತ್ಮಾ ಗಾಂಧೀಜಿಯವರ ಜೀವನ ಚರಿತ್ರೆ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ಹೇಳುವ ಕಾರ್ಯವಾಗಬೇಕು ಹಾಗೂ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿಸಬೇಕು ಎಂದು ರಾಜ್ಯದ ಪ್ರವಾಸೋದ್ಯಮ , ಕನ್ನಡ ಮತ್ತು ಸಂಸ್ಕೃತಿ, ಪ್ರಾಚ್ಯವಸ್ತು ಹಾಗೂ ಸಕ್ಕರೆ ಇಲಾಖೆಗಳ ಸಚಿವರಾದ ಸಿ. ಟಿ ರವಿ ಅವರು ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ತಮ್ಮ ವ್ಯಾಪ್ತಿಯ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯ ಪ್ರತಿ ಗ್ರಾಮದ ಚರಿತ್ರೆ, ಕಲೆ ಸಾಹಿತ್ಯಗಳನ್ನು ಕಲೆ ಹಾಕುವ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿ ವಿದ್ಯಾಥರ್ಿ ಹಂತದಲ್ಲೇ ನಾಡಿನ ಇತಿಹಾಸದ ಅಧ್ಯಯನ ಕಾಲೇಜು ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ತಂಡಗಳನ್ನು ರಚಿಸಿಕೊಂಡು ನಿಯೋಜಿತ ತಾಲೂಕಾ ನೋಡಲ್ ಅಧಿಕಾರಿಗಳೊಂದಿಗೆ ಆಯಾ ಗ್ರಾಮಗಳ ಆಯಾ ಗ್ರಾಮಗಳ ಕುರಿತು ಕ್ಷೇತ್ರ ಅಧ್ಯಯನ ಮಾಡಬೇಕು. ಸದರಿ ಗ್ರಾಮಗಳ ಸಮಗ್ರ ಮಾಹಿತಿ ಸಂಗ್ರಹಿಸಿ ಅಂತಿಮವಾಗಿ ಪರಿಶೀಲನೆಯಾದ ನಂತರ ವಿಕಿಪಿಡಿಯಾ ರೂಪದಲ್ಲಿ ಮಾಹಿತ ಕೋಶ ನಿರ್ಮಿಸುವ ಕೆಲಸವಾಗಬೇಕು. ಈ ಕುರಿತು ಜಿಲ್ಲಾಡಳಿತ, ಜಿಲ್ಲೆಯ ಕಾಲೇಜುಗಳ ಪ್ರಾಚಾರ್ಯದೊಂದಿಗೆ ಹಾಗೂ ನೇಮಿಸಲಾಗುವ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಸೂಕ್ತ ಕ್ರಮ ಜರುಗಿಸಬೇಕು. ವಿವಿಧ ಮಹಾನುಭಾವರುಗಳ ಜಯಂತಿ ಆಚರಣೆಗಳು ಸೀಮಿತವಾಗುತ್ತಿರುವ ಆರೋಪಗಳಿದ್ದು ಈ ಕುರಿತಂತೆ ಆದಷ್ಟು ಶೀಘ್ರ ಚಿಂತಕರು, ಸಾಹಿತಿಗಳು, ಸಾಮಾಜಿಕ ಮುಖಂಡರು, ಜನಪ್ರತಿನಿಧಿಗಳನ್ನೊಳಗೊಂಡಂತೆ ಸಭೆ ನಡೆಸಿ ಸಕರ್ಾರ ಆಯೋಜಿಸುವ ಜಯಂತಿಗಳ ಆಚರಣೆಗಳ ಸ್ವರೂಪ ಹೇಗಿರಬೇಕು. ಅವುಗಳ ಅವಶ್ಯಕತೆ ಇದೆಯೇ ಅವುಗಳನ್ನು ಯಾವ ಇಲಾಖೆಗಳು ನಡೆಸಬೇಕು ಎಂಬುದರ ಮಾಹಿತಿಯನ್ನು ಸಂಗ್ರಹಿಸಿ ವರದಿ ನೀಡಲು ಸಚಿವ ಸಿ.ಟಿ. ರವಿ ಅವರು ನಿರ್ದೇಶನ ನೀಡಿದರು.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನೊಳಗೊಂಡಂತೆ ಪ್ರವಾಸಿಗರ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಒದಗಿಸಬೇಕು. ಆಯಾ ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಪ್ರವಾಸೋದ್ಯಮದ ಕಾರ್ಯಕ್ರಮದ ತರಬೇತಿ ನೀಡುವ ಮೂಲಕ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ . ಯಾತ್ರಿ ನಿವಾಸಗಳ ನಿರ್ವಹಣೆಯ ಬಗ್ಗೆ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು. ಐತಿಹಾಸಿಕ ಹಿನ್ನೆಲೆ ಹಾಗೂ ಶಿಲ್ಪಕಲೆ ಹೊಂದಿರುವ ಆದರೆ ಸಂರಕ್ಷಣೆಯಾಗದೇ ಇರುವ ದೇವಸ್ಥಾನಗಳಿದ್ದರೆ ಅವುಗಳ ಪಟ್ಟಿ ಮಾಡಿ ಅವುಗಳ ಅಭಿವೃದ್ಧಿ ಸಂರಕ್ಷಣೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸಚಿವ ಸಿ.ಟಿ. ರವಿ ಅವರು ಸೂಚಿಸಿದರು.
ಗದಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಗುರುತಿಸಿದ 3 ಪ್ರವಾಸಿ ತಾಣಗಳಿದ್ದು, 18 ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯಾತ್ರಿ ನಿವಾಸ ಹಾಗೂ ಮೂಲಭೂತ ಸೌಕರ್ಯಗಳನ್ನೊಳಗೊಂಡಂತೆ 33 ಪ್ರವಾಸಿ ಮೂಲ ಸೌಲಭ್ಯ ಕಾಮಗಾರಿಗಳು ಮಂಜೂರಾಗಿದ್ದು ಆ ಪೈಕಿ 10 ಕಾಮಗಾರಿಗಳು ಪೂರ್ಣಗೊಂಡಿವೆ. 12 ಪ್ರಗತಿಯಲ್ಲಿವೆ. 11 ಕಾಮಗಾರಿಗಳನ್ನು ಪ್ರಾರಂಭಿಸಬೇಕಾಗಿದೆ. ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಪ. ಜಾತಿ, ಪಂಗಡ ಹಾಗೂ ಬಿ.ಸಿ.ಎಮ್ ವರ್ಗದ ನಿರುದ್ಯೋಗಿ ಅಭ್ಯಥರ್ಿಗಳಿಗೆ 2009-10 ನೇ ಅವಧಿಯಲ್ಲಿ ಇದುವರೆಗೆ ಪ.ಜಾತಿಯ 199 , ಪ. ಪಂಗಡದ 82 ಹಾಗೂ ಬಿ.ಸಿ.ಎಮ್ ವರ್ಗದ 133 ಒಟ್ಟಾರೆ 414 ನಿರುದ್ಯೋಗಿಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲಾಗಿದ್ದು 8.73 ಕೋಟಿ ರೂ. ಸಹಾಯಧನ ವಿತರಿಸಲಾಗಿದೆ. 2018-2019 ನೇ ಸಾಲಿಗೆ 4785 ವಿದ್ಯಾಥರ್ಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಮಾಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಸೋಮಶೇಖರ್ ಅವರು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ 317 ಜನ ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ. 36 ಸಾಂಸ್ಕೃತಿಕ ಭವನಗಳು ಮಂಜೂರಾಗಿದ್ದು ಆ ಪೈಕಿ 26 ಕಾಮಗಾರಿ ಪೂರ್ಣಗೊಂಡಿವೆ. 10 ಪ್ರಗತಿಯಲ್ಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಸೌರಭ, ಚಿಗುರು, ಮಹಿಳಾ ಉತ್ಸವ, ಸಾಧಕರೊಂದಿಗೆ ಸಂವಾದ, ಕವಿಗೋಷ್ಟಿ, ಜಯಂತಿ, ಉತ್ಸವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಅವರು ಸಭೆಗೆ ತಿಳಿಸಿದರು.
ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪೂರದಲ್ಲಿ ಒಂದು ಸಕ್ಕರೆ ಕಾಖರ್ಾನೆಯಿದ್ದು 2018-19 ರ ಅವಧಿಯಲ್ಲಿ 6,303 ರೈತರ 6,97,193 ಮೆ. ಟನ್ ಕಬ್ಬು ನುರಿಸಿದ್ದು ಪ್ರತಿ ಕ್ವಿಂಟಲ್ ಗೆ 2,626 ರೂ.ಗಳಂತೆ 18,308.30 ಲಕ್ಷ ರೂ. ಗಳನ್ನು ರೈತರಿಗೆ ವಿತರಿಸಲಾಗಿದೆ. ಬಾಕಿ ಹಣ ಯಾವುದೂ ಇರುವುದಿಲ್ಲ. 2019-20 ರಲ್ಲಿ ಜಿಲ್ಲೆಯಲ್ಲಿ ಕಬ್ಬು ಬೆಳೆದ ಕ್ಷೇತ್ರ 18,937 ಎಕರೆ ಇದ್ದು 4,810 ಕಬ್ಬು ಬೆಳೆಗಾರರಿದ್ದಾರೆ. ಈ ಬಾರಿ ಬೆಂಬಲ ಬೆಲೆ 2676 ಕ್ಕಿಂತ ಹೆಚ್ಚಿಗೆ ಅಂದರೆ 2800 ರೂ. ಪ್ರತಿ ಕ್ವಿಂಟಲ್ ಗೆ ನೀಡಲಾಗುತ್ತಿದ್ದು 6 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಇದೆ ಎಂದು ಆಹಾರ ಇಲಾಖೆ ಹಾಗೂ ಸಕ್ಕರೆ ಕಾಖರ್ಾನೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಗದಗ ಜಿ.ಪಂ. ಅಧ್ಯಕ್ಷ ಕುಮಾರ ಸಿದ್ಧಲಿಂಗೇಶ್ವರ ಪಾಟೀಲ, ರೋಣ ಶಾಸಕ ಕಳಕಪ್ಪ ಬಂಡಿ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.