ಕಂಪ್ಲಿ.23. ತಾಲ್ಲೂಕಿನ ಸಾಂಗತ್ರಯ ಸಂಸಕೃತಿ ಪಾಠಶಾಲೆ ಆವರಣದಲ್ಲಿ ರೈತರ ದಿನಾಚರಣೆ ನಿಮಿತ್ಯ ಕೃಷಿ ಇಲಾಖೆ ಹಾಗೂ ಕಂಪ್ಲಿ ರೈತ ಸಂಪರ್ಕ ಕೇಂದ್ರದಿಂದ 2018-19ನೇ ಸಾಲಿನ ಆತ್ಮ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ಗೋಷ್ಠಿ ಭಾನುವಾರ ನಡೆಯಿತು.
ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಕ್ಷೇತ್ರ ವ್ಯವಸ್ಥಾಪಕ ಜಿ.ನಾರಪ್ಪ ಭತ್ತ ಬೇಸಾಯ ಕುರಿತು ಉಪನ್ಯಾಸ ನೀಡಿ, ವಿಪರೀತ ರಾಸಾಯನಿಕ ಗೊಬ್ಬರಗಳ ಬಳಕೆಗೆ ಭೂಮಿಯ ಫಲವತ್ತತೆ ಕುಗ್ಗುತ್ತಿದೆ. ಒಂದೇ ಬೆಳೆಗೆ ಸೀಮಿತವಾಗದೆ, ರೈತರು ಭತ್ತ ಬೆಳೆ ಜೊತೆಗೆ ಮಿಶ್ರ ಬೆಳೆಗೆ ಹೆಚ್ಚಿನ ಆಧ್ಯತೆ ನೀಡಬೇಕು.
ಆಧುನಿಕ ಭಾರತದಲ್ಲಿ ಭೂಮಿಯು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ರೈತರ ಸಾವಯವ ಕೃಷಿ ಅಳವಡಿಕೆಗೆ ಮುಂದಾಗಬೇಕು. ಹಸಿರು ಕ್ರಾಂತಿ ಪರಿಣಾಮ ಕೃಷಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿದ್ದು, ಲಭ್ಯವಿರುವ ಹೊಸ ತಂತ್ರಜ್ಞಾನ ಬಳಸಿ ರೈತರು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಮೆಟ್ರಿ ಜಿಪಂ ಸದಸ್ಯೆ ಎಂ.ವೆಂಕಟನಾರಮ್ಮ ಕಾರ್ಯಕ್ರಮ ಉದ್ಘಾಟಿಸಿದರು.
ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿದ ಹಿನ್ನಲೆ ಆತ್ಮ ಯೋಜನೆಯಡಿಯಲ್ಲಿ ರಾಘವರೆಡ್ಡಿಗೆ ಜಿಲ್ಲಾ ಶ್ರೇಷ್ಟ ತೋಟಗಾರಿಕೆ ಪ್ರಶಸ್ತಿ, ಜಗನ್ಮೋಹನರಾವ್ಗೆ ತಾಲೂಕು ಶ್ರೇಷ್ಟ ಕೃಷಿಕ ಪ್ರಶಸ್ತಿ ಹಾಗೂ ಜಿ.ಬಸವರಾಜಗೆ ತಾಲೂಕು ಶ್ರೇಷ್ಟ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪರಶುರಾಮಪ್ಪ, ನಿದರ್ೇಶಕ ಗುಬಾಜಿ ನಾಗೇಂದ್ರಪ್ಪ, ತಾಪಂ ಸದಸ್ಯ ಎಚ್.ಈರಣ್ಣ, ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ಪರಮೇಶ್ವರ ನಾಯಕ, ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್. ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ವಿ.ಟಿ.ನಾಗರಾಜ, ಕಂಪ್ಲಿ ತಾಲೂಕು ಅಧ್ಯಕ್ಷ ಖಾಸಿಂಸಾಬ್, ಉಪಾಧ್ಯಕ್ಷ ಆದೋನಿ ರಂಗಪ್ಪ, ನಗರ ಘಟಕ ಅಧ್ಯಕ್ಷ ಕೆ.ಸುದರ್ಶನ, ರೈತ ಮುಖಂಡರಾದ ಇಟಗಿ ಬಸವನಗೌಡ, ಕುರಿ ಹುಸೇನಪ್ಪ, ಲೆಕ್ಕಿಗ ಸುರೇಶ್, ಸಿಬ್ಬಂದಿ ರೇಣುಕಾಗೌಡ, ರೈತ ಅನುವುಗಾರರಾದ ಅಮರೇಗೌಡ, ಪಕ್ಕೀರಪ್ಪ, ಸೋಮಣ್ಣ, ಜಡೇಗೌಡ ಸೇರಿದಂತೆ ಅನೇಕ ರೈತರು ಪಾಲ್ಗೋಂಡಿದ್ದರು.