ಲೋಕದರ್ಶನ ವರದಿ
ಬೆಳಗಾವಿ 04: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ 2019-2020ರ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ 'ವಾರ್ಷಿಕ ವಿಶೇಷ ಶಿಬಿರದ' ದತ್ತು ಗ್ರಾಮವಾದ ಮುಚ್ಚಂಡಿಯಲ್ಲಿ ದಿ. 01 ರಂದು ಎರಡನೇಯ ದಿನ ಪರಿಸರ ಸಂರಕ್ಷಣೆ ಎಂಬ ವಿಷಯ ಮೇಲೆ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆರ್.ಎಲ್.ಎಸ್. ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ. ಎಸ್.ಬಿ. ತಾರದಾಳೆ ಮಾತನಾಡುತ್ತ, ಪರಿಸರದ ಮಹತ್ವ ಮತ್ತು ಉಪಯೋಗದ ಬಗ್ಗೆ ತಿಳಿಸಿದರು. ಪರಿಸರ ಕಾಪಾಡಿದರೆ ಮಾನವನು ಬದುಕಲು ಸಾಧ್ಯವಾಗುತ್ತದೆ ಇಲ್ಲದಿದ್ದರೆ ಇಡೀ ಜೀವಸಂಕುಲ ನಾಶವಾಗುತ್ತದೆ. ಪ್ರತಿದಿನ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯ ಅವಿಭಾಜ್ಯ ಅಂಗವಾಗಬೇಕು. ನಮಗಾಗಿ ಹಾಗೂ ಇತರರ ಆರೋಗ್ಯಕ್ಕಾಗಿ ಒಳ್ಳೇಯ ಪರಿಸರ ಅತ್ಯವಶ್ಯ. ಇಂದಿನ ಜಾಗತೀಕ ತಾಪಮಾನ ವೈಪರಿತ್ಯದಲ್ಲಿ ಯುವ ಜನತೆ ಮರ-ಗಿಡಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾಮದ ಹಿರಿಯರಾದ ಶ್ರೀ. ವೀರಬಧ್ರ ಅಷ್ಟಗಿ ಅವರು ಶಿಬಿರಾರ್ಥಿಗಳು ಸೇವಾಮನೋಭಾವನೆಯನ್ನು ಇಟ್ಟುಕೊಂಡ ಸದೃಡ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳಿದರು.
ಶಿಬಿರದ ಶಿಬಿರಾಧಿಕಾರಿಯಾದ ಪ್ರೊ. ಎಸ್.ಎಸ್. ಅಬ್ಬಾಯಿ ಹಾಗೂ ಶ್ರೀ. ದತ್ತರಾಮ ಚೌಗುಲೆ ಹಾಗೂ ಇತರರು ಉಪಸ್ಥಿತರಿದ್ದರು. ಪೂಜಾ ಆನಿಕಿವಿ ಹಾಗೂ ತಂಡದವರು ಎನ್.ಎಸ್.ಎಸ್. ಗೀತೆಯನ್ನು ಹಾಡಿದರು. ಕುಮಾರಿ. ಕೀರ್ತಿ ಬಸೆಟ್ಟಿ ವಂದಿಸಿದರು ಕುಮಾರಿ ಸ್ನೇಹಲ್ ಕಾರ್ಯಕ್ರಮ ನಿರೂಪಿಸಿದರು.