ಸರ್ಕಾರ ಮಲತಾಯಿ ಧೋರಣೆ ಬಿಟ್ಟು ಪ್ಯಾಕೇಜ್ ಘೋಷಿಸಿ

ಲೋಕದರ್ಶನವರದಿ

ರಾಣೇಬೆನ್ನೂರು: ಮೇ.09:. ಆಟೋ ಚಾಲಕರು, ಕ್ಷೌರಿಕರು, ಕಟ್ಟಡ ಕಾಮರ್ಿಕರು, ಕೂಲಿಕಾಮರ್ಿಕರು ಸೇರಿದಂತೆ ಇತರರಿಗೆ ಘೋಷಿಸಿದಂತೆ ಅಸಂಘಟಿತ ವ್ಯಾಪಾರಿಗಳಾದ ಬೀದಿ-ಬದಿ ಉಪಹಾರ ಮಾರಾಟಮಾಡಿ ಕುಟುಂಬವನ್ನು ಸಲಹುವ ನಮಗೂ ಸಹ ವಿಶೇಷ ಪ್ಯಾಕೇಜ್ನ್ನು ಘೋಷಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಸಂಜೆ ಇಲ್ಲಿನ ದೊಡ್ಡಪೇಟೆಯಲ್ಲಿ ರಾಣೇಬೆನ್ನೂರು ತಾಲೂಕಾ ಬೀದಿ-ಬದಿ ವ್ಯಾಪಾರಿಗಳ ಸಂಘದ ನೂರಾರು ಕೆಲಸಗಾರರು ಪ್ರತಿಭಟಿಸಿ ಸಕರ್ಾರದ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದರ ಮೂಲಕ ಒತ್ತಾಯಿಸಿದರು.

    ಕರೋನಾ ವೈರಸ್ ಹಾವಳಿ ಆರಂಭವಾದಾಗಿನಿಂದ ಕಳೆದ 45ದಿವಸಗಳಿಂದ ತಾವು ಬೀದಿ-ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ಸಂಪೂರ್ಣ ಬಂದ್ಗೊಳಿ ಸಕರ್ಾರ ಮತ್ತು ಜಿಲ್ಲಾಡಳಿತದ ಆದೇಶವನ್ನು ಪಾಲಿಸಿದ್ದೇವೆ.  ಈಗ ಜಿಲ್ಲೆ ಮತ್ತು ತಾಲೂಕಿನಲ್ಲಿ ಗ್ರೀನ್ ಜೋನ್ ಇರುವುದರಿಂದ ಬಟ್ಟೆ ಅಂಗಡಿ, ದಿನಸಿ ಅಂಗಡಿ, ಬಂಗಾರದ ಅಂಗಡಿ ತೆರೆಯಲು ಅನುಮತಿ ನೀಡಿ ಆದೇಶಿಸಿದೆ. ಅದರಂತೆ ತಮಗೂ ಸಹ ಬೀದಿ-ಬದಿಯಲ್ಲಿ ಇಡ್ಲಿ  ವಡಾ, ಎಗ್ರೈಸ್, ಪಾನಿ ಪುರಿ ಸಿದ್ಧತೆ ಮಾಡಿಕೊಂಡು ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

        ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಮೃತ್ಯುಂಜಯಪ್ಪ ಕರೆಯಜ್ಜಿ ಮತ್ತು ರವೀ ಪೂಜಾರ ಅವರು ನಗರದಲ್ಲಿ ಈ ಮೂರು ಹಂತದ ವ್ಯಾಪಾರಸ್ಥರು ಸೇರಿ 300 ಕ್ಕೂ ಹೆಚ್ಚು ಕಾಮರ್ಿಕರಿದ್ದೇವೆ.  ಕಳೆದ 30 ವರ್ಷಗಳಿಂದ ಬೀದಿ-ಬದಿ ಸಾಮಾನ್ಯರು, ಜನಸಾಮಾನ್ಯರು, ಬಡವ ಶ್ರೀಮಂತ ಎನ್ನದೇ, ನಾವುಗಳು ನಿತ್ಯವೂ ಇಡ್ಲಿ, ವಡಾ, ಎಗ್ರೈಸ್, ಪಾನಿ ಪುರಿ, ಅತೀ ಕಡಿಮೆ ದರದಲ್ಲಿ ನೀಡುತ್ತಾ ನಮ್ಮ ಕುಟುಂಬವನ್ನು ನಿರ್ವಹಿಸುತ್ತಾ ಬಂದಿದ್ದೇವೆ.  ಇದು ಬಿಟ್ಟರೇ ಬೇರೆ ನಮಗೇನು ಬರುವುದಿಲ್ಲ.   ನಾವೆಲ್ಲರೂ ಕಡು-ಬಡವರೇ ಯಾರೂ ಶ್ರೀಮಂತರಲ್ಲ.  ಲಕ್ಷಾಂತರ ಬಂಡವಾಳ ಹಾಕಿ ಬೇರೆ-ಬೇರೆ ಉದ್ಯಮವನ್ನು ಮಾಡುವ ಸ್ಥಿತಿಯಲ್ಲಿ ನಾವಿಲ್ಲ ಹೀಗಿರುವಾಗ ಸಕರ್ಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು. 

     ಹಾವೇರಿ ಜಿಲ್ಲೆ ಕರೋನಾ ಮುಕ್ತವಾಗಿದ್ದು, ಇದು ಗ್ರೀನ್ ಜೋನ್ ವ್ಯಾಪ್ತಿಯಲ್ಲಿ ಇದೆ.  ಇತರೆ ಅಂಗಡಿ ತೆರೆಯಲು ಆದೇಶ ನೀಡಿದಂತೆ ನಿಭಂಧನೆಗೊಳಪಡಿಸಿ ಕೇವಲ ಪಾರ್ಸಲ್ ನೀಡಲು ಅವಕಾಶ ಕೊಟ್ಟು ಸಕರ್ಾರ ನೀಡಿದ ಆದೇಶದಂತೆಯೇ ಅನುಮತಿ ದೊರಕಿಸಿ ಕೊಟ್ಟಲ್ಲಿ ನಿಗದಿತ ಅವಧಿಯಲ್ಲಿಯೇ ನಾವು ನಮ್ಮ ವ್ಯಾಪಾರವನ್ನು ನೆರೆವೇರಿಸಿಕೊಂಡು ನಮ್ಮನ್ನು ಅವಲಂಭಿಸಿರುವ ಕುಟುಂಬಕ್ಕೆ ಜೀವನ ಸಾಗಿಸಲು ಅನುಕೂಲವಾಗುತ್ತದೆ ಕೂಡಲೇ ಜಿಲ್ಲಾಡಳಿತವು ನಮ್ಮ ಮನವಿಯನ್ನು ಪುರಸ್ಕರಿಸಿ ಶಾಸಕರು ಸಮ್ಮತಿಸಿ ಅಂಗಡಿ ತೆರೆಯಲು ಪರವಾನಗಿ ನೀಡಬೇಕೆಂದು ಸಕರ್ಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. 

     ನ್ಯಾಯವಾದಿ ಕುಮಾರ ಎಳೆಹೊಳೆ, ಚಂದ್ರಶೇಖರ ಹೂಗಾರ, ಹನುಮಂತಪ್ಪ ಚಿಕ್ಕಣ್ಣನವರ, ಗಿರೀಶ್ ಅಡಕಿ, ಅರುಣ ಬೇವಿನಹಳ್ಳಿ, ಮಲ್ಲೇಶ್ ಚಲವಾದಿ, ಕುಮಾರ ಎಲಿಗಾರ, ರವಿ ಪೂಜಾರ, ಮಲ್ಲಿಕಾಜರ್ುನ ತುಮ್ಮಿನಕಟ್ಟಿ, ಮಾಲತೇಶ್ ಲಮಾಣಿ, ರವಿ ಬೇಲೂರಪ್ಪನವರ, ಮೈಲಾರಿ ಸಾಳೇರ, ಗಂಗಪ್ಪ ಅರಳೇಶ್ವರ, ಪರಶುರಾಮ ಮೇಲಗಿರಿ ಸೇರಿದಂತೆ  ನೂರಾರು ಕಾಮರ್ಿಕರು ಪಾಲ್ಗೊಂಡಿದ್ದರು.