ಹೆಣ್ಣು ಗಂಡೆಂಬ ಭೇದ ಬಿಟ್ಟು ಮಕ್ಕಳನ್ನು ಬೆಳೆಸಿ

ಲೋಕದರ್ಶನ ವರದಿ 

ಯರಗಟ್ಟಿ 16: ಮಕ್ಕಳಲ್ಲಿ ಹೆಣ್ಣು ಗಂಡೆಂಬ ಬೇದವನ್ನು ತೊರೆದು ಇಬ್ಬರೂ ಸರಿಸಮಾನರೆಂಬ ಭಾವನೆಯೊಂದಿಗೆ ಮಕ್ಕಳನ್ನು ಬೆಳಿಸಿದಾಗ ಸಮಾಜದಲ್ಲಿ ಹೆಣ್ಣು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಬೆಳಗಾವಿ ಕ್ರೈಂ ಡಿಸಿಪಿ ಯಶೋದಾ ವಂಟಗೋಡಿ ಅಭಿಪ್ರಾಯ ಪಟ್ಟರು.

ಇಲ್ಲಿನ ಪ್ರುತ್ವಿ ಇಂಟರ್ನ್ಯಾಷನಲ್ ಶಾಲೆಯ ಎರಡನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡುತ್ತಾ ಮಕ್ಕಳ ಮುಂದೆ ಪಾಲಕರು ಮೋಬೈಲ್ ಹಾಗೂ ಟಿವ್ಹಿ ಬಳಕೆ ಮಾಡವುದನ್ನು ಬಿಟ್ಟು ಅವರ ಓದಿನ ಕಡೆ ಗಮನ ಕೊಡಬೇಕು ಎಂದು ಹೇಳಿದರು.

ಉಪನ್ಯಾಸಕಿ ಪ್ರೇಮಕ್ಕಾ ಅಂಗಡಿ ಮಾತನಾಡಿ ಬಾಲ್ಯದಲ್ಲಿಯೇ ಮಕ್ಕಳಿಗೆ ಮದರ್ತೆರೆಸಾ, ಸ್ವಾಮಿ ವಿವೇಕಾನಂದ ಹೀಗೆ ದಾರ್ಶನಿಕರ, ಮಹಾತ್ಮರ ಜೀವನ ಚರಿತ್ರೆಗಳನ್ನು ತಿಳಿಸಬೇಕು.  ಪಾಲಕರು ಮಕ್ಕಳ ಮುಂದೆ ದುಶ್ಚಟಗಳನ್ನು ಮಾಡಿದರೆ ಅವರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಮನೆಯಲ್ಲಿನ ಪರಿಸರ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಮೊದಲು ಒಳ್ಳೆಯ ಸಂಸ್ಕಾರ ಮನೆಯಲ್ಲಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿರಬೇಕು ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾದಕರಿಗೆ ಸನ್ಮಾನ, ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು, ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಲಕ್ಷ್ಮೀ ಕಳ್ಳಿಗುದ್ದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಎಸ್.ವಾಯ್.ಅಳಗೋಡಿ, ಆಶಾ ಪರೀಟ್, ರೇಖಾ ದೇವರಡ್ಡಿ, ಹೇಮಾ ಜಕರಡ್ಡಿ, ಶಿವಾನಂದ ಮಿಕಲಿ, ಪಿಎಸ್ಐ ಗೋವಿಂದಗೌಡ ಪಾಟೀಲ, ಶಾಲಾ ಸಿಬ್ಬಂದಿ ವರ್ಗ, ವಿದ್ಯಾಥರ್ಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸೌಮ್ಯ ಪಟ್ಟಣಶೆಟ್ಟಿ ಸ್ವಾಗತಿಸಿದರು, ಸವಿತಾ ದೇವರಡ್ಡಿ ನಿರೂಪಿಸಿದರು, ಶೈಲಾ ಪಟ್ಟಣಶೆಟ್ಟಿ ವಂದಿಸಿದರು.