ಕನರ್ಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖ

ಕೊಪ್ಪಳ 24: ಕೊಪ್ಪಳ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕನ್ನಡ ಮೇರು ನಟ, ನಟಸಾರ್ವಭೌಮ ಡಾ. ರಾಜ್ಕುಮಾರ್ರವರ 92ನೇ ಜನ್ಮದಿನಾಚರಣೆಯನ್ನು ಶುಕ್ರವಾರದಂದು (ಏಪ್ರಿಲ್.24) ವಾತರ್ಾ ಇಲಾಖೆ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.

ಕೋವಿಡ್-19ರ ಹಿನ್ನೆಲೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಡಾ. ರಾಜ್ಕುಮಾರ್ರವರ ಭಾವಚಿತ್ರಕ್ಕೆ ವಾತರ್ಾ ಇಲಾಖೆಯಿಂದ ಪುಷ್ಪನಮನ ಸಲ್ಲಿಸುವ ಮೂಲಕ ಅವರಿಗೆ ಗೌರವ ಸಮಪರ್ಿಸಲಾಯಿತು.  

ಡಾ. ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವಾತರ್ಾ ಇಲಾಖೆಯ ಸಹಾಯಕ ನಿದರ್ೇಶಕ ಜಿ.ಸುರೇಶ ಅವರು ಮಾತನಾಡಿ, ಡಾ. ರಾಜ್ಕುಮಾರ್ ಪ್ರಸಿದ್ಧ ಚಲನಚಿತ್ರ ನಟರು. ಕನರ್ಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಗಾಯಕರಾಗಿ ಸಹ ಹೆಸರು ಮಾಡಿದ್ದರು.  ಡಾ. ರಾಜ್ಕುಮಾರ್ ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕರಾದ ಅವರು ಸುಮಾರು ಐದು ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.  ಡಾ. ರಾಜ್ಕುಮಾರ್ ಅವರಿಗೆ ``ನಟಸಾರ್ವಭೌಮ, ವರನಟ, ಬಂಗಾರದ ಮನುಷ್ಯ, ಅಣ್ಣವ್ರು ಸೇರಿದಂತೆ ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ ಕನ್ನಡದ ಶ್ರೇಷ್ಠ ನಟರಾಗಿದ್ದರು.  

ಭಾರತ ಸಕರ್ಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗೆ ಕೊಡಮಾಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಕನರ್ಾಟಕ ಸಕರ್ಾರದಿಂದ ``ಕನರ್ಾಟಕ ರತ್ನ'' ಪ್ರಶಸ್ತಿ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅವರ ಸಿನಿಮಾರಂಗದ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.  ಇವರ ವೃತ್ತಿ ಬದುಕಿನಲ್ಲಿ ಪ್ರಮಾಣಿಕತೆ, ಶ್ರದ್ಧಾ-ಭಕ್ತಿ ಮೂಡಿಸುವಂತಹ ಕೆಲಸವನ್ನು ಮಾಡಿದ್ದರು. ಅವರು ತಮ್ಮ ಚಲನಚಿತ್ರಗಳ ಮೂಲಕ ಇತರ ನಟ, ನಟಿಯರಿಗೆ ಆದರ್ಶಪ್ರಾಯವಾಗಿದ್ದ ಅವರು ನಮಗೆಲ್ಲರಿಗೂ ಹಾಗೂ ಮುಂದಿನ ಪೀಳಿಗೆಗೂ ಮಾದರಿಯಾಗಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ.ಅವಿನಾಶ, ಅರುಣಾ ಭೋಗಿ, ಎಂ.ಪಾಂಡುರಂಗ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಗೂ ಅಪ್ರೆಂಟಿಶಿಪ್ ಅಭ್ಯಥರ್ಿಗಳು ಉಪಸ್ಥಿತರಿದ್ದರು.