ಬೆಂಗಳೂರು, ಆ 12 ಅತಿಹೆಚ್ಚು ಸಾಹಸ ದೃಶ್ಯಗಳಿರುವ ಝಾನ್ಸಿ ಐಪಿಎಸ್ ನಾಯಕಿ ಪ್ರಧಾನ ಚಿತ್ರ ಸಿನಿಮಾದ ಉದ್ದಕ್ಕೂ ಮಾಸ್ ಲುಕ್, ಹೊಡೆದಾಟದ ಸೀನ್ ಗಳಲ್ಲಿ ತೊಡಗಿಸಿಕೊಂಡಿದ್ದೇನೆ ಈ ಹಿಂದೆ ಬೇರೆ ಭಾಷೆಯ ಚಿತ್ರಗಳಲ್ಲಿ ಸಣ್ಣ ಪುಟ್ಟ ಫೈಟ್ ಮಾಡಿದರೂ ಗಾಯಗಳಾಗಿವೆ ಆದರೆ ಈ ಚಿತ್ರದುದಕ್ಕೂ ಹಲವು ಸನ್ನಿವೇಶಗಳಲ್ಲಿ ಫೈಟ್ ಮಾಡಿದರೂ ಸ್ವಲ್ಪವೂ ಗಾಯವಾಗಲಿಲ್ಲ ಇದಕ್ಕೆಲ್ಲ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ಕಾಳಜಿಯೇ ಕಾರಣ ಎಂದು ಲಕ್ಷ್ಮೀ ರೈ ಹೇಳಿದ್ದಾರೆ
ಝಾನ್ಸಿ ಐಪಿಎಸ್ ಚಿತ್ರದ ಪೋಸ್ಟರ್, ಟ್ರೇಲರ್ ಹಾಗೂ ಧ್ವನಿಸಾಂದ್ರಿಕೆ ಬಿಡುಗಡೆಯಾಗಿದ್ದು ಬಹುಭಾಷಾ ನಟಿ ಲಕ್ಷ್ಮೀ ರೈ ಖಾಕಿ ತೊಟ್ಟು ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಮೂಲತಃ ಕನ್ನಡದವರೇ ಆದ ಲಕ್ಷ್ಮೀ ಹಲವು ವರ್ಷಗಳ ನಂತರ ಚಂದನವನದಲ್ಲಿ, ವಿಶೇಷವಾಗಿ ಮಹಿಳಾ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಾಸ್ ಪ್ರೇಕ್ಷಕರನ್ನು ಸೆಳೆಯಲು ಸಿದ್ಧರಾಗಿದ್ದಾರೆ
ಭಾನುವಾರ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, 'ಗಂಡುಗಲಿ' ನಿರ್ಮಾ ಪಕ ಕೆ ಮಂಜು, ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮೊದಲಾದವರು ಪೋಸ್ಟರ್, ಟ್ರೇಲರ್ ಹಾಗೂ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು
ಶಾಂತಿ ಟೆಲಿಫಿಲಿಮ್ಸ್ ಹಾಗೂ ಭವಾನಿ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ಕಮಲ್ ಬೋಹ್ರಾ ಹಾಗೂ ರಾಜೇಶ್ ಕುಮಾರ್ ಬಂಡವಾಳ ಹೂಡಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನದ ಹೊಣೆಯನ್ನು ವಿ ಎಸ್ ಪತ್ತಿ ಗುರುಪ್ರಸಾದ್ ವಹಿಸಿಕೊಂಡಿದ್ದಾರೆ
ಎಂ ಎನ್ ಕ್ರಪಾಕರ್ ಸಂಗೀತ ಸಂಯೋಜಿಸಿದ್ದು, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ವಿರೇಶ್ ಛಾಯಾಗ್ರಹಣವಿದೆ
ತಾರಾಗಣದಲ್ಲಿ ಲಕ್ಷ್ಮೀ ರೈ, ಶ್ರೀಜಿತ್, ವೀರ್ ಆರ್ಯನ್, ರವಿಕಾಳೆ, ಮುಖೇಶ್ ತಿವಾರಿ ಮೊದಲಾದವರಿದ್ದಾರೆ ಮಹಿಳಾ ಪ್ರಧಾನವಾದ ಆಕ್ಷನ್, ಥ್ರಿಲ್ಲರ್ ಚಿತ್ರವಾದರೂ, ಭಾವನೆಗಳ ಒರತೆಗೂ ಕೊರತೆಯಿಲ್ಲ ಸದ್ಯದಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ ಎಂದು ನಿರ್ದೇಶಕ ವಿ ಎಸ್ ಗುರುಪ್ರಸಾದ್ ತಿಳಿಸಿದರು.
-:ಥ್ರಿಲ್ಲರ್ ಮಂಜು ಸಾಹಸದ 500ನೇ ಚಿತ್ರ:-
ಝಾನ್ಸಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದ 500ನೇ ಚಿತ್ರ ಎಂಬುದು ವಿಶೇಷ ಸಂಗತಿ ಈ ಹಿಂದೆ ಮಾಲಾಶ್ರೀ ಅವರ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದೇನೆ ನಾಯಕಿ ಪ್ರಧಾನವಾದ ಝಾನ್ಸಿ ಚಿತ್ರಕ್ಕೆ ಅವಕಾಶ ದೊರಕಿದಾಗ ಲಕ್ಷ್ಮೀ ರೈ ಅವರಿಗೆ ಯಾವ ಬಗೆಯ ಫೈಟಿಂಗ್ ಸೀನ್ ಕೊಡಬಹುದು ಎಂದು ಯೋಚಿಸುತ್ತಿದ್ದೆ ಆದರೆ ಅವರು ಅತ್ಯಂತ ಬೋಲ್ಡ್ ಆಗಿ ನಟಿಸಿ, ಜೋಶ್ ನೀಡುವ ಸಾಹಸ ದೃಶ್ಯಗಳು ಮೂಡಿಬರಲು ಕಾರಣರಾದರು ಈಕೆ ಮತ್ತೊಬ್ಬ ಮಾಲಾಶ್ರೀ ಎನಿಸುವುದರಲ್ಲಿ ಸಂದೇಹವಿಲ್ಲ ಎಂದರು.