17ರಂದು ಬೆಳಗಾವಿಯಲ್ಲಿ ನ್ಯಾಯವಾದಿಗಳ ಸಭೆ: ಮುಳವಾಡಮಠ

ಬೆಳಗಾವಿ : ಆಥರ್ಿಕ ತೊಂದರೆಯ ಲ್ಲಿರುವ ನ್ಯಾಯವಾದಿಗಳಿಗೆ 5 ಲಕ್ಷ ರೂ. ಮಂಜೂರಾತಿಯನ್ನು ಮಾಡಿಸುವ ಕುರಿತು ಹಾಗೂ ತ್ವರಿತವಾಗಿ ನ್ಯಾಯಾಲಯದ ಕಲಾಪವನ್ನು ಪ್ರಾರಂಭಿಸುವ ಕುರಿತು ಬರುವ 17ರಂದು ಸಭೆಯನ್ನು ಕರೆಯಲಾಗಿದೆ ಎಂದು ಬೆಳಗಾವಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ .ಜಿ. ಮುಳವಾಳಮಠ ಇಂದಿಲ್ಲಿ ಹೇಳಿದರು.

ಸೋಮವಾರ ನಗರದ ಹೊಸ ನ್ಯಾಯಾಲಯ ಆವರಣದಲ್ಲಿರುವ ನ್ಯಾಯವಾದಿಗಳ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಮತ್ತು ಲಾಕ್ಡೌನ್ನಿಂದ ಕಳೆದ 4 ತಿಂಗಳಿನಿಂದ ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳ ಕಲಾಪಗಳನ್ನು ಸ್ಥಗಿತಗೊಳಿಸಿರುವುದರಿಂದ ನ್ಯಾಯವಾದಿ ಗಳು ಆಥರ್ಿಕ ತೊಂದರೆಯಲ್ಲಿದ್ದಾರೆ.

ನ್ಯಾಯಾಲಯಗಳ ಕಲಾಪಗಳು ಪ್ರಾರಂಭವಾಗುವುದು ಇನ್ನೂ ಅನಿಶ್ಚಿತ ಮತ್ತು ಅಸ್ಪಷ್ಟ ಇರುವುದರಿಂದ ಕನರ್ಾಟಕದ ಎಲ್ಲ ಜಿಲ್ಲಾ ಮತ್ತು ತಾಲೂಕಾ ಹಾಗೂ ಬೆಂಗಳೂರು ಉಚ್ಚ ನ್ಯಾಯಾಲಯ ಮತ್ತು ಧಾರವಾಡ ಮತ್ತು ಕಲಬುಗರ್ಿ ಪೀಠಗಳ ನ್ಯಾಯವಾದಿ ಸಂಘಗಳ ಅಧ್ಯಕ್ಷರು, ಕಾರ್ಯದಶರ್ಿ, ಆಡಳಿತ ಮಂಡಳಿಯ ಸದಸ್ಯರ ಸಭೆಯನ್ನು ಇದೇ ತಿಂಗಳು 17ರಂದು ಬೆಳಗಾವಿ ನ್ಯಾಯವಾದಿಗಳ ಸಂಘದ ಸಮುದಾಯ ಭವನದ ಸಭಾ ಭವನದಲ್ಲಿ ವಿಷಯಗಳ ಚಚರ್ೆಗಾಗಿ ಸಭೆ ಕರೆಯಲಾಗಿದೆ ಆದ್ದರಿಂದ ಎಲ್ಲಾ ನ್ಯಾಯಾಧೀಶರು ಮತ್ತು ವಕೀಲರು ಭಾಗ ವಹಿಸಿ ಚಚರ್ಿಸಿ ನಿಧರ್ಾರ ತೆಗೆದುಕೊಳ್ಳುಲು ಬರಬೇಕೆಂದು ವಿನಂತಿಸಿಕೊಂಡರು.

ಇನ್ನೂ ಅಗಸ್ಟ 15 ಒಳಗಾಗಿ ಎಲ್ಲ ನ್ಯಾಯಾಧೀಶರಿಗೆ ಹಾಗೂ ನ್ಯಾಯವಾದಿಗಳಿಗೆ ಸೂಕ್ತ ಆರೋಗ್ಯದ ಸಂರಕ್ಷಣೆ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಆಥರ್ಿಕ ತೊಂದರೆಯಲ್ಲಿ ಇದ್ದಂತಹ ರಾಜ್ಯಾದ್ಯಂತ ಎಲ್ಲ ನ್ಯಾಯವಾದಿಗಳಿಗೆ ಕನಿಷ್ಟ 5 ಲಕ್ಷ ರೂ. ಬಡ್ಡಿರಹಿತ ಸಾಲವನ್ನು ಹತ್ತು ವರ್ಷದ ಕಂತಿನಲ್ಲಿ ಮರು ಪಾವತಿ ಮಾಡುವ ಷರತ್ತಿಗೆ ಒಳಪಟ್ಟು ಕನರ್ಾಟಕ ಸರಕಾರವು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಾಲ ಮಂಜೂರು ಮಾಡಲು ಕುರಿತು ಸಭೆಯಲ್ಲಿ ಆದೇಶಿಸುವುದು ಎಂದು ಹೇಳಿದರು.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳಾದ ಆರ್.ಸಿ.ಪಾಟೀಲ, ಶಿವಪುತ್ರಪ್ಪ ಪಟ್ಟಕಲ್ಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು