ಗೋಲಿಹಳ್ಳಿ : ವಿಠ್ಠಲ-ರುಕ್ಮಿಣಿ ಮಂದಿರದ ಉದ್ಘಾಟನೆ ನೆರೆವೆರೆಸಿದ ಶಾಸಕಿ ಅಂಜಲಿ ನಿಂಬಾಳ್ಕರ ಭಾರತ ದೇಶವು ಜಾತ್ಯಾತೀತತೆಯಿಂದ ಕೂಡಿದ್ದು, ಬಹಳ ಉತ್ತಮ ಸಂಸ್ಕೃತಿಯನ್ನು ಹೊಂದಿದೆ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಹೇಳಿದರು.
ತಾಲೂಕಿನ ಬೀಡಿ ಸಮೀಪದ ಗೋಲಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಂತಹ ವಿಠ್ಠಲ-ರುಕ್ಮಿಣಿ ಮಂದಿರದ ಗರ್ಭಗುಡಿಯ ಉದ್ಘಾಟನೆ ನೆರೆವೆರೆಸಿ ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ಧರ್ಮದ ಕಾರ್ಯಗಳು ನಡೆಯಬೇಕಾದರೆ ಪ್ರತಿ ಗ್ರಾಮಗಳಲ್ಲಿ ನಡೆದರೆ ಮಾತ್ರ ಭಾರತ ದೇಶದ ಸಂಸ್ಕೃತಿ ಉಳಿಯಲು ಸಾಧ್ಯ. ಇದರ ಜೋತೆಗೆ ನಮ್ಮ ಮುಂದಿನ ಪಿಳಿಗೆಯು ಜಾತ್ಯಾತೀತತೆಯಿಂದ ಬದುಕಬೇಕಾದರೆ ಜಾತಿ ಭೇಧ ಭಾವ ಮರೆತು ಮಂದಿರ, ಮಸೀದಿ, ಚಚರ್್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯ ಮಾಡಿ ಎಂದು ನುಡಿದರು. ಸಾನಿಧ್ಯವನ್ನು ಅವರೊಳ್ಳಿ ಬಿಳಕಿ ಮಠದ ಚನ್ನಬಸವದೇವರು ವಹಿಸಿದ್ದರು.
ಅದೇ ದಿನ ತಾಲೂಕಿನ ಹಲಗಾ ಮತ್ತು ಬೀಡಿ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.