ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ: ರಾಷ್ಟ್ರಪತಿ, ಅಮಿತ್ ಷಾ ಭೇಟಿ ಅನುಮತಿ ಕೋರಿ ಪತ್ರ- ಬಿಜೆಪಿ

ಕೋಲ್ಕತ, ಅ 11:     ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಗಂಜ್ನಲ್ಲಿ ಸೋಮವಾರ ನಡೆದ ತ್ರಿವಳಿ ಹತ್ಯೆಯ ನಂತರ  ರಾಜ್ಯದ ಇತ್ತೀಚಿನ ಕಾನೂನು ಸುವ್ಯವಸ್ಥೆ ಕುರಿತು ವಿವರಿಸಲು ಪಶ್ಚಿಮ ಬಂಗಾಳ ಬಿಜೆಪಿ ಘಟಕವು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಭೇಟಿಗಾಗಿ ಅನುಮತಿ ಕೋರಿದೆ. 

ಸೋಮವಾರ ನಡೆದ ಘಟನೆಯಲ್ಲಿ ಗಂಡ, ಹೆಂಡತಿ ಮತ್ತು ಮಗ ಸೇರಿ ಇಡೀ ಕುಟುಂಬವನ್ನು ಅಪರಿಚಿತ ದುಷ್ಕರ್ಮಿಗಳು ಹರಿತ ಆಯುಧಗಳಿಂದ ಹತ್ಯೆ ಮಾಡಿದ್ದರು.  

ಘಟನೆಗೆ ಬಿಜೆಪಿ, ರಾಜಕೀಯ ಬಣ್ಣ ಹಚ್ಚಿ  ಸರ್ಕಾರದ ವಿರುದ್ಧ ಸಂಚು ಹೂಡಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. 

ಮುರ್ಷಿದಾಬಾದ್ನ ಜಿಯಗಂಜ್ನಲ್ಲಿ ವಿಜಯದಶಮಿಯಂದು ಬಂಧು ಪ್ರಕಾಶ್  ಪಾಲ್ (35), ಅವರ ಗರ್ಭಣಿ ಪತ್ನಿ ಬ್ಯೂಟಿ ಮತ್ತು 8 ವರ್ಷದ ಮಗ ಅಂಗನ್ ಅವರ ಬರ್ಬರ ಹತ್ಯೆಯು  ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ಪಕ್ಷದ ರಾಜ್ಯ ಘಟಕದ  ಉಸ್ತುವಾರಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವಗರ್ಿಯಾ ಆರೋಪಿಸಿದ್ದಾರೆ.  

ಶಿಕ್ಷಕ  ಬಂಧುಪ್ರಕಾಶ್ ಪಾಲ್ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದರು ಎಂದು ಬಿಜೆಪಿ ಪ್ರತಿಪಾದಿಸಿದೆ. ಪಾಲ್ ಅವರ ಕುಟುಂಬವನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ. ರಾಜ್ಯದಲ್ಲಿ 80 ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರನ್ನು  ಹತ್ಯೆ ಮಾಡಲಾಗಿದೆ. ಬಿಜೆಪಿ ಮತ್ತು ಸಂಘಪರಿವಾರವನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ನಾಯಕತ್ವ ಆರೋಪಿಸಿದೆ.  

ಬಂಗಾಳದಲ್ಲಿನ ಕಾನೂನು  ಸುವ್ಯವಸ್ಥೆ ಕುರಿತು ವಿವರಿಸಲು ಬಿಜೆಪಿ ರಾಜ್ಯ ಘಟಕ ಮುಂದಿನ ವಾರ ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವರ ಅನುಮತಿ ಕೋರಿ ಮನವಿ ಪತ್ರವನ್ನು ಸಲ್ಲಿಸಿದೆ.