ಲೋಕದರ್ಶನ ವರದಿ
ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣಕ್ಕೆ ಚಾಲನೆ
ಹಾರೂಗೇರಿ 20: ಲೋಕಕಲ್ಯಾಣ ಮತ್ತು ಸಾರ್ಥಕ ಬದುಕಿಗೆ ದೇವನಾಮಸ್ಮರಣೆ, ಅರ್ಥಪೂರ್ಣ ಗ್ರಂಥಗಳ ಪಠಣೆ ಅವಶ್ಯವಿದೆ. ಪಾಂಡುರಂಗನ ಧ್ಯಾನ, ಪವಾಡ ಹಾಗೂ ಚರಿತ್ರೆಗಳನ್ನು ತಿಳಿದುಕೊಂಡು, ಪಠಣ ಮಾಡುವುದರಿಂದ ಬದುಕು ಪಾವನವಾಗುತ್ತದೆ ಎಂದು ಸಂತಶ್ರೀ ಪಾಂಡುರಂಗ ಧರ್ಮಟ್ಟಿ ಹೇಳಿದರು.
ಪಟ್ಟಣದ ವಿಠ್ಠಲ ದೇವಸ್ಥಾನದಲ್ಲಿ ಗುರುವಾರ ಏಳು ದಿನಗಳವರೆಗೆ ನಡೆಯುತ್ತಿರುವ 55ನೇ ಸಪ್ತಾಹ ಮತ್ತು ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸುಖ, ನೆಮ್ಮದಿಯ ಜೀವನಕ್ಕೆ ದೇವರ ಅನುಗ್ರಹ, ಆಧ್ಯಾತ್ಮಿಕ ಮತ್ತು ಧರ್ಮದ ಅರಿವು ಅಗತ್ಯವಿದೆ ಎಂದರು.
ವಡಗೋಲದ ವ್ಯಾಸ ಪೀಠಾಧಿಕಾರಿ ವಿಕ್ರಮ ಸಿಂಗಾಡಿ 55ನೇ ಸಪ್ತಾಹಕ್ಕೆ ಚಾಲನೆ ನೀಡಿ, ಏಳು ದಿನಗಳವರೆಗೆ ಪ್ರತಿದಿನ ಲೋಕಕಲ್ಯಾಣಕ್ಕಾಗಿ ಪಾರಾಯಣ, ಸಾಮೂಹಿಕ ಕಾಕಡಾರತಿ ಮತ್ತು ಭೂಪಾಳಿ, ಏಕನಾಥ ಷಷ್ಠಿ ಸ್ಥಾಪನೆ ಕುರಿತು ವಿವರಿಸಿದರು.
ದೇವಸ್ಥಾನದ ಅಧ್ಯಕ್ಷ ಮಾರುತಿ ಧರ್ಮಟ್ಟಿ, ಶಿವಗೊಂಡ ಧರ್ಮಟ್ಟಿ, ಗೋಪಾಲ ಧರ್ಮಟ್ಟಿ, ಪ್ರಧಾನಿ ಧರ್ಮಟ್ಟಿ, ಅನೀಲ ಚವ್ಹಾನ, ಜೋತೆಪ್ಪಾ ಉಮರಾಣಿ, ಗಜಪ್ಪ ಗಸ್ತಿ, ಸದಾಶಿವ ಧರ್ಮಟ್ಟಿ, ಬಿ.ಬಿ.ಮೋಕಾಶಿ, ಪ್ರಲ್ಹಾದ ಅರಕೇರಿ, ಮಾರುತಿ ದಳವಾಯಿ, ಮಹಾದೇವ ಗೌಡರ, ಬಾಬು ಕೆಳಗಡೆ, ಕುಮಾರ ಗುರವ ಪೂಜಾರಿ, ಮನ್ವಿತ ಅರಕೇರಿ, ಜ್ಞಾನೇಶ್ವರ ಧರ್ಮಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಮತ್ತು ಮಂತ್ರಪಠಣದಲ್ಲಿ ಪಾಲ್ಗೊಂಡಿದ್ದರು.