ಚೈತ್ಯಭೂಮಿ ಚಲೋ ಕಾರ್ಯಕ್ರಮಕ್ಕೆ ಚಾಲನೆ

Launch of Chaitya Bhumi Chalo programme

ಗದಗ 04: 68ನೇ ಡಾಽಽ ಬಾಬಾಸಾಹೇಬ ಅಂಬೇಡ್ಕರವರ ಮಹಾ ಪರಿನಿರ್ವಾಣದ ನಿಮಿತ್ಯ ಗದಗ ಜಿಲ್ಲೆ ಡಾಽಽ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾಽಽ ಬಾಬು ಜಗಜೀವನರಾವ್ ಸಮಾನತೆ ಸಮಿತಿ, ಗದಗ, ವತಿಯಿಂದ ಯುವರಾಜ ಬಳ್ಳಾರಿ, ಇವರ ನೇತೃತ್ವದಲ್ಲಿ ದಿನಾಂಕ: 04-12-2024 ಚೈತ್ಯಭೂಮಿ (ಮುಂಬೈ-ದಾದರ) ಚೇಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಗದಗ ದಿಂದ ಮುಂಬೈ-ದಾದರ ತೆರಳುವ ರೈಲು ಪ್ರಯಾಣಕ್ಕೆ ಕಾರ್ಯಕರ್ತರೊಂದಿಗೆ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಸುಂಕಪ್ಪ ಎನ್‌.ಗುತ್ತಿ, ಮಹೇಶ ನಾನಬಾಲ, ನಾಗೇಶ ಕಿನ್ನಾರಿ, ನಾಗರಾಜ ಎನ್‌.ಬಳ್ಳಾರಿ, ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.