ವೈದ್ಯಕೀಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ

ಗುತ್ತಲ 18: ತೊಟ್ಟಿಲನ್ನು ತೂಗುವ ಕೈಗಳು ಇಡೀ ಜಗತ್ತನ್ನು ಕೂಡಾ ತೂಬಲ್ಲದು ಎಂದು ಗುತ್ತಲ ಕಲ್ಮಠ ಹಾಗೂ ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ಧ ಶ್ರೀ ಹೇಳಿದರು.

    ಗುತ್ತಲ ಪಟ್ಟಣ ಪಂಚಾಯತ್ ಕಾಯರ್ಾಲಯದಲ್ಲಿ ನಡೆದ ಸನ್ 2019-20 ನೇ ಸಾಲಿನ 24.10%,7.25% ಹಾಗೂ 5% ಅನುದಾನದಲ್ಲಿ ಪ.ಜಾ, ಪ.ಪಂ, ಹಾಗೂ ಇತರೆ ಬಡ ಜನಾಂಗ ಮತ್ತು ವಿಕಲಚೇತನ ಅರ್ಹ ಫಲಾನುಭವಿಗಳಿಗೆ ಶೈಕ್ಷಣಿಕ ಸಹಾಯಧನ ವೈದ್ಯಕೀಯ ಹಾಗೂ ತಾಂತ್ರಿಕ ವಿದ್ಯಾಥರ್ಿಗಳಿಗೆ ಲ್ಯಾಪ್ಟಾಪ್ ವಿತರಣೆ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮತ್ತು ಕಸ ವಿಲೇವಾರಿ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಗುತ್ತಲ ಪಟ್ಟಣ  ಪಂಚಾಯತಿಯಾಗಿ  ಮೇಲ್ದಜರ್ೆಗೇರಿದರು ಕೆಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ  ಅದನ್ನು ಮನಗಂಡು ಜನಪ್ರತಿನಿಧಿಗಳು ತಮ್ಮ ಅಧಿಕಾರವಧಿಯಲ್ಲಿ ಗುತ್ತಲ ಪಟ್ಟಣ ಯಾವ ಮೂಲಭೂತ ಸೌಕರ್ಯಗಳ ಅಗತ್ಯವಿದೆಯೋ ಅದನ್ನು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಆದಷ್ಟು  ಜನರ ಸಮಸ್ಯೆಗಳನ್ನು ಪರಿಹರಿಸಿದರೆ ಈ ಭಾಗದ ಜನರ ಮನದಲ್ಲಿ ತಾವುಗಳು ಮಾಡಿದ ಕಾರ್ಯ ಅಚ್ಚಳಿದಂತೆ ಉಳಿಯುತ್ತದೆ ಅದರ ಜೊತೆಗೆ ಗುತ್ತಲ ಪಟ್ಟಣದ ಹೃದಯ ಭಾಗದಲ್ಲಿ ಹಲವು ಸಮಸ್ಯೆಗಳು ಎದ್ದು ಕಾಣುತ್ತಿದ್ದು ಅವುಗಳನ್ನು ಆದಷ್ಟು ಬೇಗನೆ ಸರಿಪಡಿಸಿ. ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿ ಮಾತನಾಡಿದ ಶಾಸಕ ನೆಹರು ಓಲೇಕಾರ ಮಾತನಾಡಿ, ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಪರಿಶ್ರಮಪಟ್ಟು ಓದಿ ಹೆಚ್ಚಿನ ಅಂಕಗಳನ್ನು ಗಳಿಸಿದಾಗ ಬಹುಮಾನಗಳು ತಮ್ಮನ್ನರಸಿಕೊಡು ಬರುತ್ತವೆ ಅದರ ಜೊತೆಗೆ ವಿದ್ಯಾಥರ್ಿಗಳು  ಸರಕಾರದಿಂದ ವಿದ್ಯಾಥರ್ಿಗಳಿಗೆ ದೊರೆಯುವಂತಹ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಸಮಾಜದಲ್ಲಿ ಇತರರಿಗೂ ಮಾದರಿಯಾಗಬೇಕು ಎಂದರು. ಪ್ರಾಸ್ತಾವಿಕವಾಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಏಶು ಬೆಂಗಳೂರ ಮಾತನಾಡಿದರು.

ಮಾಜಿ ಜಿ.ಪಂ.ಅಧ್ಯಕ್ಷ ವಸಂತ ಕಳಸಣ್ಣನವರ, ನಾಗರಾಜ ಬಸೇಗಣ್ಣಿ,ಶಿವಣ್ಣ ತೋಟದ, ಶಿವಣ್ಣ ಬಂಡಿವಡ್ಡರ, ಪ.ಪಂ.ಸದಸ್ಯರಾದ ಮಂಜುನಾಥ ಶೀತಾಳ, ಮಂಜುನಾಥ ಸಿದ್ಧಣ್ಣನವರ, ರಮೇಶ ಮಠದ, ಲಿಂಗೇಶ ಬೆನ್ನೂರ,ನಾಗರಾಜ ಏರಿಮನಿ, ಪ್ರಕಾಶ ಪಠಾಡೆ, ಮೊಹಿದ್ದಿನ್ ಖಾಜಿ,ಕೋಟೆಪ್ಪ ಬನ್ನಿಮಟ್ಟಿ, ಅನಸೂಯಾ ಯರವಿನತಲಿ, ಅನ್ನಪೂರ್ಣ ಬಂಡಿವಡ್ಡರ,ಹಸ್ಮತಬಿ ರಿತ್ತಿ, ಪ್ರೇಮಾ ಸಾಲಗೇರಿ, ಪ.ಪಂ.ಸಿಬ್ಬಂದಿ ವರ್ಗದವರಾದ ಪರಶುರಾಮ್ ಧನೋಜಿ,ನೀಲಪ್ಪ ಗುಡ್ಡಣ್ಣನವರ, ಬಸವರಾಜ ಗಡದ ಸೇರಿದಂತೆ ವಿದ್ಯಾಥರ್ಿಗಳು, ಫಲಾನುಭವಿಗಳು,ಸಾರ್ವಜನಿಕರು ಹಾಗೂ ಪ.ಪಂ.ಸಿಬ್ಬಂದಿಯವರಿದ್ದರು.