ಕೊಲಂಬೊ, ಮೇ 18,ಶ್ರೀಲಂಕಾ ಕ್ರಿಕೆಟ್ (ಸಿಎಲ್ ಸಿ) ಜುಲೈನಲ್ಲಿ ಭಾರತ ಮತ್ತು ಬಾಂಗ್ಲಾದೇಶಕ್ಕೆ ಆತಿಥ್ಯ ಕಲ್ಪಿಸುವುದರೊಂದಿಗೆ ದೇಶದಲ್ಲಿ ಕ್ರಿಕೆಟ್ ಪುನರಾರಂಭಿಸಲು ಯೋಜನೆ ಹಾಕಿಕೊಂಡಿದೆ. ಆದರೆ ಪ್ರಸ್ತಾವನೆಗೆ ಉಭಯ ಮಂಡಳಿಗಳ ಒಪ್ಪಿಗೆಯನ್ನು ಇದು ಆಧರಿಸಿದೆ. ''ಭಾರತ ಮತ್ತು ಬಾಂಗ್ಲಾದೇಶಗಳ ಮಂಡಳಿಗಳೊಂದಿಗೆ ನಾವು ಸಮಾಲೋಚನೆ ನಡೆಸಿದ್ದು, ಅವುಗಳ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇವೆ. ಸದ್ಯ ಈ ಎರಡು ಸರಣಿಗಳು ಮುಂದೂಡಿಕೆಯಾಗಿಲ್ಲ, '' ಎಂದು ಶ್ರಿಲಂಕಾ ಸಿಇಒ ಆಶ್ಲೇ ಡಿ ಸಿಲ್ವಾ ಹೇಳಿಕೆಯನ್ನು ಇಎಸ್ ಪಿಎನ್ ಕ್ರಿಕ್ ಇನ್ಫೋ ಉಲ್ಲೇಖಿಸಿದೆ.
ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಇಬ್ಬರು ಪ್ರವಾಸ ಕುರಿತು ದೃಢಪಡಿಸಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ತಂಗುವ ಸ್ಥಳದಲ್ಲಿ ಆಟಗಾರರ ಪ್ರತ್ಯೇಕತೆಯ ಕ್ರಮಗಳು ಸೇರಿದಂತೆ ಸಾರಿಗೆ ವ್ಯವಸ್ಥೆಯ ಸವಾಲುಗಳನ್ನು ಈ ಪ್ರವಾಸವು ಒಳಗೊಂಡಿದೆ."ಮೇ 31 ರವರೆಗೆ ವಿಮಾನ ಪ್ರಯಾಣ ಮತ್ತು ಜನರ ಸಂಚಾರದ ಮೇಲಿನ ನಿರ್ಬಂಧಗಳನ್ನು ಗಣನೆಗೆ ತೆಗೆದುಕೊಂಡು, ಬಿಸಿಸಿಐ ತನ್ನ ಗುತ್ತಿಗೆ ಪಡೆದ ಆಟಗಾರರಿಗೆ ಕೌಶಲ್ಯ ಆಧಾರಿತ ತರಬೇತಿ ಶಿಬಿರವನ್ನು ಆಯೋಜಿಸುವ ಮುನ್ನ ಮತ್ತಷ್ಟು ಸಮಯ ಎದುರುನೋಡಲಿದೆ, " ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.