ರಾಣೇಬೆನ್ನೂರ 17 : ಫೆ 17 - ಶಿವಶರಣರ ನಾಡು ಕರುನಾಡು. ಜನಸಾಮಾನ್ಯರ ಭಾಷೆಯನ್ನೇ ಬಳಸಿಕೊಂಡು ಧರ್ಮ ಆಚರಣೆಯನ್ನು ಬೋಧಿಸಿದ ಪರಂಪರೆ ನಮ್ಮದು. ಧರ್ಮ ಮತ್ತು ಭಾಷೆ ವಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಹೊನ್ನಾಳಿ ಹಿರೇಕಲ್ ಮಠದ ಶ್ರೀ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.
ಅವರು. ಮೃತ್ಯುಂಜಯ ನಗರದ ಶ್ರೀ ಚನ್ನೇಶ್ವರ ಮಠದಲ್ಲಿ ನಡೆದ ಭಾರತ ಹುಣ್ಣಿಮೆ ಮಾಸಿಕ ಜ್ಞಾನವಾಹಿನಿ -289 ನೇ ಧರ್ಮ ಜಾಗೃತಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಜ್ಞಾನವಾಹಿನಿಯು ನಾಡಿನ ಭಕ್ತ ಸಮುದಾಯಕ್ಕೆ ಮತ್ತು ಧರ್ಮಾಭಿಮಾನಿಗಳಲ್ಲಿ ಧರ್ಮ ಜಿಜ್ಞಾಸೆಯನ್ನು ಜಾಗೃತಗೊಳಿಸುತ್ತಿದೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಕಾರ್ಯಕ್ರಮಗಳು ಮತ್ತಷ್ಟು ಅರ್ಥಪೂರ್ಣವಾಗಿ ನಡೆಯಲು ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿದೆ ಎಂದರು. ಕನ್ನಡ ನಾಡು ನುಡಿ ಸಂಸ್ಕೃತಿ ಇವುಗಳ ಮೂಲಕ ಆಚಾರ ವಿಚಾರ ಮತ್ತು ಐತಿಹಾಸಿಕ ಪರಂಪರೆಗಳು, ಸಾಧಕರು, ಸಂತರು ಶರಣರು, ಇವುಗಳ ಸ್ಮರಣೆ ಭವಿಷ್ಯದ ಯುವ ಜನಾಂಗಕ್ಕೆ ಮಾರ್ಗದರ್ಶಕಗಳಾಗಿವೆ, ಅಂದಿನ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರು, ನಾಡಿನ ಭಕ್ತ ಸಮುದಾಯಕ್ಕೆ ನಡೆದಾಡುವ ದೇವರೆಂದೆ ಗುರುತಿಸಿಕೊಂಡಿದ್ದಾರೆ, ತಾವು ಸಹ, ಅವರು ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯುತ್ತಿದ್ದೇವೆ ಎಂದು ಶ್ರೀಗಳು ನುಡಿದರು.
ದಿವ್ಯ ನೇತೃತ್ವದಲ್ಲಿದ್ದ ಗುಡ್ಡದಾನ್ವೆರಿ ವಿರಕ್ತ ಮಠದ ಶ್ರೀ, ಶಿವಯೋಗಿ ಮಹಾಸ್ವಾಮಿಗಳು ಮದ್ವೀರಶೈವ ಶಿವಯೋಗಮಂದಿರ ಹಾಗೂ ಅಖಿಲಭಾರತ ವೀರಶೈವ ಮಹಾಸಭಾ ಸಂಸ್ಥಾಪಕರಾದಶ್ರೀ,ಹಾನಗಲ್ಲ ಕುಮಾರ ಶಿವಯೋಗಿಗಳ 158ನೆಯ ಜಯಂತಿ ಉತ್ಸವದ ನಿಮಿತ್ಯ ಕಾರಣಿಕ ಪುರುಷ ಕುಮಾರ ಶಿವಯೋಗಿ ಜೀವನ ಮತ್ತು ಸಾಧನೆ ಹಾಗೂ ಭಕ್ತ ಸಮುದಾಯಕ್ಕೆ ನೀಡಿದ ಮಾರ್ಗದರ್ಶನ ಕುರಿತು ಮಾತನಾಡಿದರು. ಎಸ್ ಟಿ ಜೆ ಐ ಟಿ ಪ್ರಾದ್ಯಾಪಕ ಡಾ. ಎಂ. ಈ. ಶಿವಕುಮಾರ ಹೊನ್ನಾಳಿ ಅವರು ತರಳಬಾಳು ಲಿಂ. ಶಿವಕುಮಾರ ಮಹಾಸ್ವಾಮಿಗಳ ಜೀವನ ಸಾಧನೆ ಕುರಿತು ಉಪನ್ಯಾಸ ಮಾಡಿದರು. ಮುಖ್ಯ ಅತಿಥಿಗಳಾಗಿದ್ದ ನಗರಸಭೆ ನೂತನ ಅಧ್ಯಕ್ಷ ಶ್ರೀಮತಿ ಚಂಪಕ್ಕ ರಮೇಶ್ ಬಿಸಲಹಳ್ಳಿ ಉಪಾಧ್ಯಕ್ಷ ನಾಗೇಂದ್ರಶಾ ಮಾ. ಪವಾರ, ಮೊದಲಾದವರನ್ನು ಗುರು ರಕ್ಷೆ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ನಡೆದು ಬಂದ ದಾರಿ ಕುರಿತು ಗೌರವ ಕಾರ್ಯದರ್ಶಿ ಜಗದೀಶ ಮಳೆಮಠ ಸಭೆಗೆ ವಿವರಿಸಿದರು.
ವೇದಿಕೆಯಲ್ಲಿ ಬಸವರಾಜ ಪಾಟೀಲ್, ಮಠದ ಕಾರ್ಯದರ್ಶಿ ಅಮೃತಗೌಡ ಡಿ. ಹಿರೇಮಠ,ಅಧ್ಯಕ್ಷ ಪ್ರಭಾಕರ ಶಿಗ್ಲಿ, ಎನ್.ಬಿ. ಶೆಟ್ಟರ, ಪಿ ಸಿ ತಿಳುವಳ್ಳಿ, ಬಿದ್ದಾಡ್ಡೆಪ್ಪ ಚಕ್ರಸಾಲಿ, ಎಂ. ಕೆ. ಹಾಲಸಿದ್ದಯ್ಯ ಶಾಸ್ತ್ರಿಗಳು, ನಂದೀಶ್ ಬಿ.ಬಿ.ಶೆಟ್ಟರ್, ವಿದ್ಯಾವತಿ ಮಳಿಮಠ, ಚಂದ್ರಶೇಖರ ಮಡಿವಾಳರ, ಗಾಯಿತ್ರಮ್ಮ ಕುರುವತ್ತಿ, ಭಾಗ್ಯಮ್ಮ ಗುಂಡಗಟ್ಟಿ, ಬಸವಾನಂದ ಶೆಟ್ಟರ, ರಾಜೇಂದ್ರಕುಮಾರ ತಿಳುವಳಿ, ಮೃತುಂಜಯ ಪಾಟೀಲ್, ಎಂ. ಆರ್. ಮುರುಗೇಂದ್ರ,ನಿರ್ಮಲಾ ಲಮಾಣಿ, ಮತ್ತಿತರರು ಉಪಸ್ಥಿತರಿದ್ದರು. ರಜನಿ ಕರಿಗಾರ ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು. ಪಾಠ ಶಾಲೆಯ ವಟುಗಳು ವೇದ ಘೋಷ ಮಾಡಿದರು. ಕಾರ್ಯದರ್ಶಿ ಅಮೃತ ಗೌಡ ಹಿರೇಮಠ ಸ್ವಾಗತಿಸಿದರು. ಶ್ರೀಮತಿ ಕಸ್ತೂರಿ ಪಾಟೀಲ್ ನಿರೂಪಿಸಿ, ಹಾಲ ಸಿದ್ದಯ್ಯ ಶಾಸ್ತ್ರಿಗಳು ವಂದಿಸಿದರು.