ಫೆಂಗಲ್ ಚಂಡಮಾರುತದಿಂದ ಭೂ ಕುಸಿತ: ಅವಶೇಷಗಳಡಿ ಸಿಲುಕಿದ : ಏಳು ಮಂದಿ

Landslide due to Cyclone Fengal: Seven trapped under debris

ತಿರುವಣ್ಣಾಮಲೈ 02: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ತಮಿಳನಾಡಿನ ತಿರುವಣ್ಣಾಮಲೈನಲ್ಲಿ ಭೂ ಕುಸಿತ ಸಂಭವಿಸಿದ್ದು, ಏಳು ಮಂದಿ ಭಾನುವಾರ ಸಂಜೆಯಿಂದ ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಸುಮಾರು 12 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ  ಸಿಬ್ಬಂದಿ, ಕಮಾಂಡೋ, ತಮಿಳುನಾಡಿನ ಅಗ್ನಿ ಶಾಮಕ ದಳ ಸೇರಿದಂತೆ ಸುಮಾರು 170 ಜನರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೃಹತ್ ಗಾತ್ರದ ಕಲ್ಲುಗಳು ಇರುವುದರಿಂದ ಸಂತ್ರಸ್ತರನ್ನು ಪತ್ತೆ ಹಚ್ಚಲು ಸ್ಕ್ಯಾನಿಂಗ್ ಯಂತ್ರಕ್ಕೆ ಕಷ್ಟವಾಗುತ್ತಿದೆ ಎಂದು ರಕ್ಷಣಾಧಿಕಾರಿ ಸುವಿಕ್ಕೈನ್ ರಾಜ್ ತಿಳಿಸಿದ್ದಾರೆ.

ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಮಾನವಶಕ್ತಿಯನ್ನು ಅವಲಂಬಿಸಿದ್ದೇವೆ. ಸಂತ್ರಸ್ತರು ಕೆಸರಿನಡಿಯಲ್ಲಿ ಹೂತು ಹೋಗಿರುವುದು ದೃಢಪಟ್ಟಿದ್ದು, ಮೊದಲು ಕಲ್ಲುಗಳನ್ನು ತೆಗೆಯುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಚಿವ ಇ.ವಿ. ವೇಲು, ಕಲೆಕ್ಟರ್ ಬಾಸ್ಕರ ಪಾಂಡಿಯನ್ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು.