ಭೂ ಪರಿವರ್ತನೆ ಇಲ್ಲದೆ ಕೈಗಾರಿಕೆಗಳಿಗೆ ಭೂಮಿ ವಿರೋಧ
ಬಳ್ಳಾರಿ 13 :ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಭೂಪರಿವರ್ತನೆ ಇಲ್ಲದೇ ಕೈಗಾರಿಕಾ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿರುವುದನ್ನು ಆಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ ಎಂದು ಏ ಐ ಕೆ ಕೆ ಎಂ ಎಸ್ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಭೂ ಪರಿವರ್ತನೆ ಪ್ರಕ್ರಿಯೆ ವಿಳಂಬವಾಗುತ್ತದೆ ಎಂಬ ನೆಪವೊಡ್ಡಿ ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಜೀವನಾಧಾರವಾಗಿರುವ ಭೂಮಿಯನ್ನು ಕಾರ್ೋರೇಟ್ ಬಂಡವಾಳಿಗರಿಗೆ ಹಾಗೂ ಭೂ ದಂಧೆ ನಡೆಸುವ ಮಾಫಿಯಾಗಳಿಗೆ ಎಗ್ಗಿಲ್ಲದೆ ರೈತರ ಜಮೀನನ್ನು ವಶಪಡಿಸಿಕೊಳ್ಳಲು ಅನುವು ಮಾಡಿಕೊಡಲು ಹೊರಟಿರುವ ರಾಜ್ಯ ಸರ್ಕಾರದ ಈ ನಡೆಯನ್ನು ಒಪ್ಪಲು ಸಾಧ್ಯವಿಲ್ಲ.
ಭೂಮಿ ಕಳೆದುಕೊಂಡ ರೈತರು ಬದುಕಿನ ಆಸರೆಗಾಗಿ ಕೆಲಸ ಹುಡುಕಿಕೊಂಡು ನಗರಗಳತ್ತ ಗುಳೆ ಹೋಗುವ ಗಂಭೀರ ಸ್ವರೂಪದ ಪರಿಣಾಮವನ್ನು ಸೃಷ್ಟಿಸುತ್ತದೆ. ಈಗಾಗಲೇ ನಗರಗಳಲ್ಲಿ ನಿರುದ್ಯೋಗ ಸಮಸ್ಯೆ ಗಣನೀಯವಾಗಿ ಏರುತ್ತಿದ್ದು, ಗುಳೇ ಹೋಗುವ ರೈತಕಾರ್ಮಿಕರು ಕುಟುಂಬ ಸಹಿತ ಬೀದೀಬೀದಿಗಳಲ್ಲಿ ಜೀವನ ಸಾಗಿಸುವ ದುಸ್ಥಿತೀಗೀಡಾಗುದ್ದಾರೆ.
ಇಡೀ ರಾಜ್ಯದಲ್ಲಿ ಈಗಾಗಲೇ ಹಲವಾರು ಯೋಜನೆಗಳ ಹೆಸರಿನಲ್ಲಿ ಸಾವಿರಾರು ಎಕರೆ ರೈತರ ಫಲವತ್ತಾದ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಸಾಲಸೂಲಮಾಡಿಕೊಂಡ ಬಡರೈತರು ಅನಿವಾರ್ಯ ಕಾರಣಗಳಿಂದಾಗಿ ತಮ್ಮ ಜಮೀನನ್ನು ಮಾರಿಕೊಂಡು ಪಟ್ಟಣಗಳಿಗೆ ವಲಸೆ ಹೋಗಿ ಜೀವನಪಯಂರ್ತ ಕೂಲಿಯಾಳುಗಾಳಿಗೆ ದುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮನ್ನಾಳುವ ಸರ್ಕಾರಗಳ ಬಂಡವಾಳಶಾಹಿ ಪರ ಮತ್ತು ಉದ್ಯಮ ಪತಿಗಳ ನೀತಿಗಳಿಂದಾಗಿ ಇಂದು ರೈತರು ದಿವಾಳಿಯಾಗುತಿದ್ದಾರೆ.
60-70 ವರ್ಷಗಳಿಂದ ಉಳಿಮೆಮಾಡಿಕೊಂಡು ಬಂದ ಬಡರೈತರಿಗೆ ಹಕ್ಕು ಪತ್ರಕೊಡಲು ಮೀನ ಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ ಕೈಗಾರಿಕಾ ಪತಿಗಳಿಗೆ ಭೂಮಿ ಕೊಡಲು ತುದಿಗಾಲಮೇಲೆ ನಿಂತಿರುವುದು ಅವರ ಬಂಡವಾಳಪರ ಹಾಗೂ ರೈತ ವಿರೋಧಿ ನಿಲುವು ಸ್ಪಷ್ಟವಾಗಿ ಗೋಚರಿಸುತ್ತದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ರೈತರಿಗೆ ದ್ರೋಹ ಬಗೆಯುವ ಈ ಕಾಯ್ದೆಯನ್ನು ಯಾವ ಕಾರಣಕ್ಕೂ ಮಂಡಿಸಬಾರದೆಂದು ರೈತ ಸಂಘಟನೆಯಿಂದ ಒತ್ತಾಯಿಸುತ್ತೇವೆ. ಹಾಗೂ ಸರ್ಕಾರದ ಇಂತಹ ರೈತ,ಕೃಷಿ ಕಾರ್ಮಿಕ ನೀತಿಯನ್ನು ವಿರೋಧಿಸಿ ಜನಾಂದೋಲನ ಬೆಳೆಸಲು ಮುಂಬರಬೇಕೆಂದು ಅವರು ಜನತೆಗೆ ಕರೆ ನೀಡಿದರು.