ಬೆಂಗಳೂರು, ಜೂ 12, ರಾಜ್ಯ ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಸೆಕ್ಷನ್ 63ಎ, 79ಎ ಮತ್ತು 79ಬಿ ಯನ್ನು ರದ್ದು ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ರಾಜ್ಯ ಸಭಾ ಸದಸ್ಯ ಕೆ. ಸಿ. ರಾಮಮೂರ್ತಿ ಹೇಳಿದ್ದಾರೆ.ಪತ್ರಿಕಾ ಪ್ರಕಟಣೆಯಲ್ಲಿ ಅವರು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಣಯ ಐತಿಹಾಸಿಕವಾಗಿದೆ. ಕಳೆದ 45 ವರ್ಷ ಗಳಿಂದ ಈ ಕಾನೂನು ತೊಡಕಾಗಿತ್ತು. ಇದನ್ನು ರದ್ದುಪಡಿಸುವ ಮೂಲಕ ರಾಜ್ಯ ಸರ್ಕಾರ ಅತ್ಯುತ್ತಮ ಕ್ರಮ ಕೈಗೊಂಡಿದೆ ಎಂದಿದ್ದಾರೆ.ಇದರಿಂದ ಸಾರ್ವಜನಿಕರಿಗೆ ಭಾರೀ ಅನುಕೂಲವಾಗಿದೆ. ಈ ಸೆಕ್ಷನ್ ಗಳ ರದ್ದತಿ ಯಿಂದ ಇನ್ನುಮುಂದೆ ಜನ ಸಾಮಾನ್ಯರೂ ಕೃಷಿ ಭೂಮಿ ಖರೀದಿಸ ಬಹುದಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್. ಅಶೋಕ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.