ಕಾರ್ಮಿಕ- ನೌಕರರ ವಿರೋಧಿ ತೀರ್ಮಾನ: ಕಪ್ಪುಪಟ್ಟಿ ಪ್ರತಿಭಟನೆ

ಬೆಂಗಳೂರು, ಜೂನ್ 2, ಯಡಿಯೂರಪ್ಪ ನೇತೃತ್ವದ ಸರ್ಕಾರದ ಕಾರ್ಮಿಕ ಹಾಗೂ  ನೌಕರರ  ವಿರೋಧಿ ಕ್ರಮ  ಖಂಡಿಸಿ ರಾಜ್ಯ  ಸರ್ಕಾರಿ ನೌಕರರು ಇದೆ ಗುರುವಾರ ವಿರುದ್ಧ  ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದಾರೆ.ಅಂದು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸ ಮಾಡಲಿದ್ದಾರೆ. ಎಂದು  ಸರ್ಕಾರಿ ನೌಕರರ ಒಕ್ಕೂಟ ಹೇಳಿದೆ.ವಿವಿಧ ಇಲಾಖೆಗಳನ್ನು ವಿಲೀನ ಮಾಡಲು ಹೊರಟಿರುವುದು, ಕೆಲಸದ ಅವಧಿಯನ್ನು 8 ರಿಂದ 10 ಗಂಟೆಗೆ ಹೆಚ್ಚಳ ಮಾಡಲು  ಮುಂದಾಗಿರುವುದು  ಸೇರಿದಂತೆ ಸರ್ಕಾರದ ಕಾರ್ಮಿಕ ಮತ್ತು ನೌಕರ ವಿರೋಧಿ ತೀರ್ಮಾನ  ಖಂಡಿಸಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ.ಇದೆ ಗುರುವಾರ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾಗಲಿದ್ದಾರೆ. ಆದರೆ, ಎಲ್ಲರೂ ಅಂದು ಕೈಗೆ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡಲಿದ್ದಾರೆ. ರಾಜ್ಯ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಕುರಿತು ಮನವಿ ಸಲ್ಲಿಸುವ  ನಿರೀಕ್ಷೆ ಇದೆ.ರಾಜ್ಯ ಸರ್ಕಾರ ಕೈಗಾರಿಕೆ ಹಾಗೂ ಇನ್ನಿತರ ಉದ್ಯಮ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 10 ಗಂಟೆಗಳಿಗೆ ವಿಸ್ತರಣೆ ಮಾಡಿ, ಇದು  ಮೇ 22ರಿಂದ ಆಗಸ್ಟ್ 21ರ ತನಕ  ಹೊಸ ಆದೇಶ ಜಾರಿಯಲ್ಲಿರುತ್ತದೆ ಎಂದು ಕಾರ್ಮಿಕ ಇಲಾಖೆ ಹೇಳಿತ್ತು.