ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎಲ್.ಎಸ್.ಶಾಸ್ತ್ರಿ ಆಯ್ಕೆ

ಬೆಳಗಾವಿ 7: ರಾಮದುರ್ಗದಲ್ಲಿ ಇದೇ ಎಪ್ರಿಲ್ 11 -12 ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ಮೂರನೇ ಚುಟುಕು ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿ ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಅವರನ್ನು ರಾಜ್ಯ ಸಮಿತಿ, ಜಿಲ್ಲಾ ಸಮಿತಿ ಹಾಗೂ ರಾಮದುರ್ಗ ತಾಲೂಕಾ ಸಮಿತಿಗಳು ಸವರ್ಾನುಮತದಿಂದ ಆಯ್ಕೆ ಮಾಡಿವೆ.  

ಶಾಸ್ತ್ರಿಯವರು ಸುಮಾರು ಎರಡೂವರೆ ದಶಕಗಳ ಕಾಲ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಅಸಂಖ್ಯಾತ ಸಾಹಿತ್ಯಾಸಕ್ತರಿಗೆ ವೇದಿಕೆ ಕಲ್ಪಿಸಿ ಉತ್ತೇಜನ ನೀಡಿದ್ದಲ್ಲದೇ ಎರಡು ರಾಜ್ಯ ಮಟ್ಟದ ಮತ್ತು ಎರಡು ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಸಹ ಸಂಘಟಿಸಿದ್ದಾರೆ. ಮೂರು ಚುಟುಕು ಕಾವ್ಯ ಕೃತಿಗಳ ಸಹಿತ ಒಟ್ಟು ಐವತ್ತಕ್ಕೂ ಹೆಚ್ಚು ಕೃತಿರಚನೆ ಮಾಡಿರುವ ಶಾಸ್ತ್ರಿಯವರು ಕಳೆದ ಐವತ್ತೆಂಟು ವರ್ಷಗಳಿಂದಲೂ ಪತ್ರಕರ್ತರಾಗಿ ಸಾಹಿತಿ ಕಲಾವಿದರಾಗಿ ಸಾವಿರಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದವರಾಗಿದ್ದಾರೆ. ಹದಿನೈದಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಅವರು ಹೊಸ ಬರೆಹಗಾರರನ್ನು , ಪತ್ರಕರ್ತರನ್ನು ಬೆಳೆಸುವ ಕಾರ್ಯವನ್ನೂ ಮಾಡಿದ್ದಾರೆ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಜಿಲ್ಲ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಸಣ್ಣ ಪತ್ರಿಕೆಗಳ ಸಂಘ, ಇಂಪು ಸಂಗೀತ ವೇದಿಕೆ, ಸಾಹಿತ್ಯ ಸಂಜೆ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದವರಾಗಿದ್ದಾರೆ.  

  ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಗೊಂಡ ಶಾಸ್ತ್ರಿಯವರಿಗೆ ಚುಸಾಪ ರಾಜ್ಯ ಸಂಚಾಲಕ ಡಾ. ಎಂ. ಜಿ. ಆರ್. ಅರಸ್, ಹಿರಿಯ ಕವಿ ಜಿನದತ್ತ ದೇಸಾಯಿ, ಜಿಲ್ಲಾ ಗೌರವಾಧ್ಯಕ್ಷ ಪಿ. ಬಿ. ಸ್ವಾಮಿ, ಅಧ್ಯಕ್ಷ ಅಶೋಕ ಮಳಗಲಿ, ಕಾಯರ್ಾಧ್ಯಕ್ಷೆ ದೀಪಿಕಾ ಚಾಟೆ, ಉಪಾಧ್ಯಕ್ಷರಾದ ಬಸವರಾಜ ಸಸಾಲಟ್ಟಿ , ಗುಂಡೇನಟ್ಟಿ ಮಧುಕರ , ಆನಂದ ಪುರಾಣಿಕ ಮೊದಲಾದವರು ಅಭಿನಂದಿಸಿದ್ದಾರೆ. 

ಬೆಳಗಾವಿ ಜಿಲ್ಲಾ ಚುಸಾಪ ಅಧ್ಯಕ್ಷ ಅಶೋಕ ಮಳಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.