ಕುವೆಂಪು ಸಾಹಿತ್ಯದ ಕಾವ್ಯಯಾನ ಅನನ್ಯ: ಮರಡಿ

ಲೋಕದರ್ಶನವರದಿ

ಆಲಮಟ್ಟಿ: ಪ್ರಕೃತಿ ಹಾಗೂ ಕುವೆಂಪು ಅವರ ದೃಷ್ಠಿಕೋನದಲ್ಲಿ ಬೇರೆಯಾಗಿರಲಿಲ್ಲ.ಆದರೆ ವೈಚಾರಿಕತೆಯ ನಿಲುವು ಅದ್ಭುತ.ಅವು ಮನುಷ್ಯ ಚೈತನ್ಯದ ರೂಪ ಪಡೆದಿವೆ. ಚಲನಶೀಲತೆ ಮಂಕಾಗಿಸುವ ಎಲ್ಲ ವಿಕೃತಿಗಳಿಗೆ ತಿಲಾಂಜಲಿ ಹಾಕಿ ಮನುಕುಲದ ಘನತೆ ಎತ್ತಿ ಹಿಡಿದಿವೆ ಎಂದು ಆಲಮಟ್ಟಿ ಎಂ.ಎಚ್.ಎಂ.ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಗುರುಮಾತೆ ಕವಿತಾ ಮರಡಿ ಅಭಿಪ್ರಾಯಿಸಿದರು.

  ಸ್ಥಳೀಯ ರಾವಬಹದ್ಧೂರ ಡಾ.ಫ.ಗು.ಹಳಕಟ್ಟಿ (ಆರ್.ಬಿ.ಪಿ.ಜಿ.)ಪ್ರೌಢಶಾಲೆಯಲ್ಲಿ ಭಾನುವಾರ ವಿಶ್ವ ಮಾನವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪುರವರ ಜನ್ಮದಿನೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವದಾದ್ಯಂತ ಕನ್ನಡ ಸಾಹಿತ್ಯವನ್ನು ಸೊಗಸಾಗಿ ಪಸರಿಸಿದ ಕುವೆಂಪು ಅವರಲ್ಲಿ ಹೊಂಕರಿಸಿದ ಪರಿಸರ ಪ್ರೀತಿ ಅವರ ಎಲ್ಲ ಕಾವ್ಯಾಯಾನ ಪಯಣದ ಲಹತಿಯಲ್ಲಿ ಮೇಳೈಸಿವೆ ಹೀಗೆ ಸಾಹಿತ್ಯದ ಹಲ ವಿಧದ ಕೃಷಿಯಲ್ಲಿ ತಮ್ಮದೇ ಛಾಪು ಮೂಡಿಸಿ ಕನ್ನಡಿಗರ ಮನದಲ್ಲಿ ನೆಲೆಯೂರಿದ್ದಾರೆ ಎಂದು ಅವರು ನುಡಿದರು.

ಕನ್ನಡ ಮಹಾನ ಚೇತನ,ಶ್ರೇಷ್ಠ ಚಿಂತಕ ದಾರ್ಶನಿಕನಿಂದಲೇ ಕನ್ನಡಕ್ಕೆ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿಯ ಹಿರಿಮೆ ಗರಿಮೆ ಲಭಿಸಿದೆ. ಈ ಮೆರಗನ್ನು ತಂದುಕೊಟ್ಟ ಅಗ್ರಮಾನ್ಯ ಕವಿ ಕುವೆಂಪುರವರ ಶ್ರೀ ರಾಮಾಯಾಣ ದರ್ಶನಂ ಮಹಾಕಾವ್ಯ ಸಂಸ್ಕ್ರತ ಹಾಗೂ ಹಿಂದಿ ಭಾಷೆಗೆ ಅನುವಾದವಾಗಿವೆ ಈ ಅನಿಕೇತನ ಕವಿ ಲೇಖಕ,ಪ್ರಾಧ್ಯಾಪಕ, ಪ್ರಾಂಶೂಪಾಲ,ಕುಲಪತಿಗಳಾಗಿಯೂ ಸೇವಾ ಕೈಂಕರ್ಯ ಗೈದು ಚಿರಸ್ಥಾಯಿಯಾಗಿದ್ದಾರೆ ಎಂದು ಕವಿತಾ ಮರಡಿ ಅಭಿಮತ ವ್ಯಕ್ತಪಡಿಸಿದರು.

ಶ್ರೀಕ ಎಲ್.ಆರ್.ಸಿಂಧೆ, ಕುವೆಂಪು ಅವರು ಸದಾಕಾಲವೂ ಪ್ರಾತಃಸ್ಮರಣೀಯರು ಅವರ ಆತ್ಮಕಥೆ, ಜೀವನ ಚರಿತ್ರೆಯೇ ಒಂದು ರೋಚಕತೆಯ ಮಹಾಕಾವ್ಯ ಅನಿಕೇತನ ಪದ್ಯದ ಮೂಲಕ ವಿಶ್ವಮಾನವನ ಸಂದೇಶ ಸಾರಿರುವ ಕಾವ್ಯ ಲೋಕದ ಅನಘ್ರ್ಯ ರತ್ನನ ಹೆಜ್ಜೆಗುರುತು ವಣರ್ಿಸಲಸಾಧ್ಯ ಎಂದರು.ಡಿ.ಕೆ.ಮುದ್ದಾಪುರ, ಮೇರಕವಿ, ರಾಷ್ಟ್ರಕವಿ ಎಂಬಿತ್ಯಾದಿ ಗೌರವ ಹೊಂದಿರುವ ಕುವೆಂಪು ಮಹಾನ ಸ್ಪೂತರ್ಿದಾಯಕ ಕವಿಯಾಗಿದ್ದಾರೆ. 

   ಜೈ ಭಾರತ ಜನನಿಯ ತನುಜಾತೆ ಕನ್ನಡ ನಾಡ ಗೀತೆ ರಚಿಸಿ ಕನ್ನಡ ನೆಲದಲ್ಲಿನ ಕಣಕಣದಲ್ಲಿ ನೆಲೆಗೊಂಡಿದ್ದಾರೆ.ಮುಖ್ಯ ಗುರು ಜಿ.ಎಂ.ಕೋಟ್ಯಾಳ ಮಾರ್ಗದರ್ಶನದಲ್ಲಿ ಶಾಂತೂ ತಡಸಿ ಕುಂವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಫಕ್ಕೀರಪ್ಪ ನಾಯ್ಕರ,ವಿದ್ಯಾ ಮಹೇಂದ್ರಕರ,ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ,ಗೋಪಾಲ ವಡ್ಡರ, ಸೇರಿದಂತೆ ಮತ್ತಿತರರು ಇದ್ದರು