ಲೋಕದರ್ಶನ ವರದಿ
ಕುರುಗೋಡು 24: ಪಟ್ಟಣ ಸಮೀಪದ ಕುಡಿತಿನಿ ಪಟ್ಟಣದ ಬಳಿರುವ ತುಂಗಭದ್ರ ಎಚ್ಎಲ್ಸಿ ಡಿ.07 ತೂಬಿನಿಂದ ಕಡಿಮೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕೆಳ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂದು ಶಾಸಕ ಜೆ.ಎನ್.ಗಣೇಶ ರೈತರೊಂದಿಗೆ ಕಾಲುವೆ ಹತ್ತಿರ ಕುಳಿತು ಸಂಬಂಧಿಸಿದ ಅಧಿಕಾರಿಗಳು ಬಂದು ತಕ್ಷಣವೇ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವಂತೆ ಒತ್ತಾಯಿಸಿ ಧರಿಣಿ ನಡೆಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡಿತಿನಿ ಡಿ07 ತೂಬಿನಿಂದ ಸಿದ್ದಮ್ಮನಹಳ್ಳಿ, ಬಾದನಹಟ್ಟಿ, ಎರ್ರಂಗಳ್ಳಿ, ಮದಿರೆ, ಕೋಳೂರು, ಬೈಲೂರು, ಸಿಂಧಿಗೇರಿ ಸೇರಿದಂತೆ ಇತರೆ ಗ್ರಾಮಗಳ ಮೂಲಕ ಕಾಲುವೆ ಸಂಪರ್ಕ ಹೊಂದಿದ್ದು. ಈ ಕಾಲುವೆಗಳಿಗೆ ಸಧ್ಯ 280 ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಕೆಳ ಭಾಗದ ಗ್ರಾಮಗಳಾದ ಕೋಳುರು, ಬೈಲೂರು, ಸಿಂಧಿಗೇರಿ ಸೇರಿದಂತೆ ಇತರೆ ಕೆಲ ಗ್ರಾಮಗಳಿಗೆ ನೀರು ತಲುಪದೆ ಮೇಲ್ಬಾಗದ ಗ್ರಾಮಗಳಿಗೆ ಸರಿ ಹೋಗುತ್ತೀವೆ ಇದರಿಂದ ಕೆಳ ಭಾಗದ ರೈತರು ಸಮರ್ಪಕವಾಗಿ ನೀರು ಕಾಣದಂತಾಗಿದೆ. ಇದರಿಂದ ರೈತರ ಮಧ್ಯೆ ಘರ್ಷಣೆಗೆ ಹಿಡಾಗುವ ಸಾಧ್ಯತೆಗಳು ಕಂಡು ಬರುತ್ತಿದ್ದು. ಜತೆಗೆ ಕೆಳ ಭಾಗದ ರೈತರಿಗೆ ಕೆಲಸ ಕಾರ್ಯಗಳು ಇಲ್ಲದಂತಾಗಿ, ಸರಿಯಾಗಿ ಬೆಳೆಗಳು ಬೆಳೆಯುವುದಕ್ಕೆ ಅಗದೆ ಜಮೀನುಗಳು ಬಿಳುಬಿಡುವಂತಾಗಿದ್ದು, ಕೆಲ ಗ್ರಾಮದ ರೈತರು ಜೀವನ ನಿರ್ವಹಣೆ ಮಾಡಲು ಗುಳೆ ಹೋಗುತ್ತಿದ್ದಾರೆ ಅದ್ದರಿಂದ ಸದ್ಯ ಬರುವ 280 ಕ್ಯೂಸೆಕ್ಸ್ ನೀರಿಗಿಂತ 400 ಕ್ಯೂಸೆಕ್ಸ್ ನೀರು ಬಿಟ್ಟಾರೆ ಮಾತ್ರ ಕೆಳ ಭಾಗದ ರೈತರಿಗೆ ಸಮಪರ್ಕವಾಗಿ ನೀರು ತಲುಪತ್ತವೆ ಆಗ ಮಾತ್ರ ಬೆಳೆ ಬೆಳೆಯಲು ಅನುಕೂಲ ವಾಗುತ್ತೇದೆ ಮತ್ತೇ ಗುಳೆ ಹೋಗುವುದು ಕೂಡ ತಪ್ಪುತ್ತದೆ ಆಗಾಗಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಕುರುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಬಂಗಿಮಲ್ಲಯ್ಯ, ಎಇಇ ಸುರೇಂದ್ರ ರೆಡ್ಡಿ, ಎಇ ಕಿರಣ್, ಚುಕ್ಕಡಿ ಶ್ರೀನಿವಾಸ, ಹೊನ್ನುರಪ್ಪ, ಶಿವರಾಮ್ ರೆಡ್ಡಿ, ತುಬಾಕಿ ಮಲ್ಲಯ್ಯ ಸೇರಿದಂತೆ ಸುತ್ತಮುತ್ತ ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು.