ಲೋಕದರ್ಶನ ವರದಿ
ಕುರುಗೋಡು 18: ಪಟ್ಟಣ ಸಮೀಪದ ಕುಡಿತಿನಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ತಾಂಡವಾಡುತ್ತಿದ್ದ ಹಿನ್ನಲೆಯಲ್ಲಿ ಇದಕ್ಕೆ ಪರಿಹಾರ ಕಲ್ಪಿಸಲು ಸಂಸದ ವೈ.ದೇಂದ್ರಪ್ಪ ಇತ್ತಿಚ್ಚಿಗೆ ತಿಮ್ಮಲಾಪುರ ಬಳಿಯ ತುಂಗಭದ್ರಾ ಮೇಲ್ಮಟ್ಟದ ಕಾಲುವೆಯಿಂದ ನೀರು ಪೂರೈಸುವ ಕುರಿತು ತಿಮ್ಮಲಾಪುರದ ಪಂಪ್ಹೌಸ್ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ತಹಸಿಲ್ದಾರ್ ತಂಡ ಮತ್ತೆ ಬೇಟಿ ನೀಡಿ ನೀರು ಪೂರೈಕೆಗೆ ಪರಿಶೀಲನೆ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ತಹಸಿಲ್ದಾರ್ ನಾಗರಾಜ ಮಾತನಾಡಿ, ರೈತರ ಉಪ ಕಾಲುವೆಗಳಿಂದ ಜಾಕ್ ವೆಲ್ ಮೂಲಕ ಕುಡುತಿನಿ ಕೆರೆಗೆ ನೀರು ಪೂರೈಸಲಾಗುತ್ತಿರುವುದರಿಂದ ಸಕಾಲಕ್ಕೆ ಕೆರೆ ತುಂಬಲು ಸಾಧ್ಯವಿಲ್ಲ ಎಂಬ ಜನರ ಆರೋಪದ ಮೇರೆಗೆ ಸಂಸದರು ಮತ್ತು ಶಾಸಕರು ಈಗಾಗಲೇ ಬೇಟಿ ನೀಡಿ ನೀರು ತುಂಬಿಸಲು ಹಲವು ಕ್ರಮ ಕೈಗೊಂಡಿದ್ದಾರೆ. ಅದರಂತೆ ನಾವು ಕೂಡ ಜನಪ್ರತಿನಿಧಿಗಳ ಇನ್ನಷ್ಟು ಗಮನಕ್ಕೆ ತಂದು ಎಚ್.ಎಲ್.ಸಿ ಕಾಲುವೆಯ ಮೂಲಕ ನೀರು ಹರಿಸಿ ಜನರ ಸಮಸ್ಯೆ ಬಗೆಹರಿಸುವ ಕಾರ್ಯ ನಡೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪಪಂ. ಸದಸ್ಯರಾದ ವೆಂಕರಮಣಬಾಬು, ನಾಗರಾಜ, ದೊಡ್ಡಬಸಪ್ಪ, ಕನಗಿರಿ ಪಂಪಾಪತಿ ಸೇರಿದಂತೆ ಮತ್ತಿತರರು ಇದ್ದರು.