ಕಾರವಾರ, ಮಾ.20 : 110 ಕೆ.ವಿ ಉಪಕೇಂದ್ರ ಶಿರಸಿ ಯಲ್ಲಿ ತುರ್ತಾಗಿ ಬ್ಯಾಟರಿ ಚಾರ್ಜರ್ ಹಾಗೂ ಬ್ಯಾಟರಿ ಸೆಟ್ ಬದಲಾವಣೆ ಕಾರ್ಯ ಇರುವುದರಿಂದ ಮಾ.22 ರಂದು ಬೆಳಗ್ಗೆ 10 ಗಂಟೆಯಿಂದ 1 ಗಂಟೆವರೆಗೆ ಶಿರಸಿ-ಕುಮಟಾ 110 ಮಾರ್ಗದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ ಕಾರಣ 220 ಕೆ.ವಿ.ಎ ಕಾರವಾರದಿಂದ ವಿದ್ಯುತ್ ಸಂಪರ್ಕ ಪಡೆಯಲಾಗುವುದು. ಈ ಸಮಯದಲ್ಲಿ 110ಕೆ.ವಿ ಕುಮಟಾ-ಕಾರವಾರ ಮಾರ್ಗದಲ್ಲಿ ಓವರಲೋಡ ಆಗುವ ಕಾರಣ ಕುಮಟಾ ಉಪವಿಭಾಗದ ಗ್ರಾಮೀಣ ಪ್ರದೇಶಗಳಾದ ಗೋಕರ್ಣ ಶಾಖೆಯ ಮಾದನಗೇರಿ, ಬಂಕಿಕೊಡ್ಲ, ಗಂಗಾವಳಿ, ತದಡಿ, ಓಂ ಬೀಚ್ ಮತ್ತು ಮಕಾರಕಲ್ ಶಾಖೆಯ ಮೂರುರ-ಕಲ್ಲಬ್ಬೆ, ಸಂತೆಗುಳಿ, ಉಳ್ಳೂರಮಠ, ಹೊದಕೆಶಿರುರು ಹಾಗೂ ಮಿರ್ಜಾನ್, ಕತಗಾಲ, ಧಾರೇಶ್ವರ, ವಾಲ್ಗಳ್ಳಿ, ಬಾಡಾ, ಹೆಗಡೆ ಫೀಡರಿನ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ, ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ)ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.