ಗದಗ 30: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಬಾಲಭವನ ಸೊಸೈಟಿಯ ಸಹಯೋಗದಲ್ಲಿ ಶುಕ್ರವಾರ ಬೆಂಗಳೂರಿನ ರಾಜ್ಯ ಬಾಲ ಭವನ ಸೊಸೈಟಿಯಲ್ಲಿ ನಡೆದ ರಾಜ್ಯ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಗದಗನ ಕೃಷ್ಣಪ್ರಿಯಾ ಬದಿ ಪ್ರಥಮ ಸ್ಥಾನ ಪಡೆದಿದ್ದಾಳೆ. ವಾದ್ಯ ಸಂಗೀತದಲ್ಲಿ ಕೊಳಲು ಕುಮಾರಿ ಭಾಗ್ಯ ವಿಭೂತಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಪರ್ಧೆಯಲ್ಲಿ ವಿಜೇತರಿಗೆ ಕಲಾಶ್ರೀ ಪ್ರಶಸ್ತಿಯನ್ನು ವಿತರಿಸಿದರು.
ಪ್ರಶಸ್ತಿ ಪಡೆದಂತಹ ವಿಜೇತರಿಗೆ ಶನಿವಾರ ಜಿಲ್ಲಾ ಬಾಲಭವನ ಅಧ್ಯಕ್ಷರು ಹಾಗೂ ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭರತ್ ಎಸ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಪದ್ಮಾವತಿ ಜಿ ಅವರು ಅಭಿನಂದಿಸಿದ್ದಾರೆ.