ಮಂಗಳೂರು, ಮೇ 15, ಕಡಲತೀರ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ದುಬೈನಿಂದ ಮಂಗಳೂರಿಗೆ ಮರಳಿದ 15 ಮಂದಿಯಲ್ಲಿ ಕೋವಿಡ್-19ಸೋಂಕು ದೃಢಪಟ್ಟಿದೆ.ಕಳೆದ ಮೇ 12 ರಂದು ದುಬೈನಿಂದ 179 ಜನರು ದುಬೈನಿಂದ ತಾಯ್ನಾಡಿಗೆ ಮರಳಿದ್ದರು. ದುಬೈನಿಂದ ಮಂಗಳೂರಿಗೆ ಬಂದಿಳಿದಿದ್ದ ಇವರನ್ನು ನಿಲ್ದಾಣದಿಂದ ನೇರವಾಗಿ ಕ್ವಾರೆಂಟೇನ್‌ಗೆ ಕರೆದೊಯ್ಯಲಾಗಿತ್ತು. ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಪೈಕಿ ಒಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಸೋಂಕು ತಗಲಿದವರಲ್ಲಿ ನಾಲ್ವರು ಮಹಿಳೆಯರು, ಒಬ್ಬ ಬಾಲಕ ಹಾಗೂ ಹತ್ತು ಪುರುಷರು ಸೇರಿದ್ದಾರೆ. ಏರ್ ಲಿಫ್ಟ್ ಅಗಿದ್ದ 179 ಪ್ರಯಾಣಿಕರ ಪೈಕಿ 123 ಜನ ಮಂಗಳೂರಿಗರಾಗಿದ್ದು 15 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಸದ್ಯ ದ.ಕ ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 50 ಪ್ರಕರಣಗಳ ಸಂಖ್ಯೆ ದಾಖಲಾಗಿದೆ.ಇಲ್ಲಿಯವರೆಗೆ ಐವರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 34 ಕ್ಕೆ ಏರಿದೆ. ಇದರಲ್ಲಿ 20 ಮಂದಿಗೆ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕವೇ ಮುಳುವಾಗಿದೆ.ಜಿಲ್ಲಾಡಳಿತ ಕ್ಕೆ ನಿಯಂತ್ರಣ ಮಾಡುವುದೇ ಹರಸಾಹಸವಾಗಿದೆ. ಪಾಸಿಟಿವ್ ಕೇಸ್ಗಳ ಜೊತೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ನಿನ್ನೆ ಕೂಡ ಒಂದು ಬಲಿಯಾಗಿದೆ. ಮಂಗಳೂರು ನಗರದ ಬೊಳೂರು ನಿವಾಸಿ 58 ವರ್ಷದ ಮಹಿಳೆ ಮಂಗಳೂರಿನ ಕೊವೀಡ್ ಆಸ್ಪತ್ರೆ ಯಲ್ಲಿ ಅಸುನೀಗಿದ್ದಾರೆ. ಫಸ್ಟ್ ನ್ಯೂರೋ ಆಸ್ಪತ್ತೆಯಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯಿತ್ತಿದ್ದ ಈ ಮಹಿಳೆಗೆ ಸೋಂಕು ಇರುವುದು ಗೊತ್ತಾಗಿದ್ದು ಏಪ್ರಿಲ್ 28 ರಂದು. ನಂತರ ನಿನ್ನೆ ಮಧ್ಯಾಹ್ನ 12.45 ರ ವೇಳೆಗೆ ಮಹಿಳೆ ಸಾವುಗೀಡಾಗಿದ್ದು, ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ ಇತರ ಪ್ರಯಾಣಿಕರ ಆರೋಗ್ಯದ ಮೇಲೂ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.