ಟೋಕಿಯೊ,
ಏ 22 ,ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಸಂಘಟನಾ ಸಮಿತಿ (ಟೋಕಿಯೊ 2020) ಜತೆ
ಕಾರ್ಯನಿರ್ವಹಿಸುತ್ತಿದ್ದ ಪುರುಷರ ಉದ್ಯೋಗಿಗೆ ಕೋವಿಡ್-19 ಸೋಂಕು ಇರುವುದು
ಪತ್ತೆಯಾಗಿದೆ ಎಂದು ಬುಧವಾರ ಪ್ರಕಟಿಸಲಾಗಿದೆ.ಟೋಕಿಯೊ 2020, ಈ ಕುರಿತು ಪ್ರಕಟಣೆ
ಬಿಡುಗಡೆ ಮಾಡಿದ್ದು, 30 ವರ್ಷದ ನೌಕರನಿಗೆ ಏಪ್ರಿಲ್ 21ರಂದು ಕೊರೊನಾ ವೈರಸ್ ಸೋಂಕು
ಇರುವುದು ದೃಢ ಪಟ್ಟಿದೆ ಎಂದು ತಿಳಿಸಿದೆ. ಪೂರ್ವ ಟೋಕಿಯೊದ ಚುವೊ-ಕು, ಹರುಮಿಯಲ್ಲಿರುವ
ಟೋಕಿಯೊ 2020 ಮುಖ್ಯ ಕಚೇರಿಯಲ್ಲಿಈತ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿಸಲಾಗಿದೆ.
ಸೋಂಕು
ಪೀಡಿತ ಉದ್ಯೋಗಿಯು ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಟೋಕಿಯೊ 2020, ಪೀಡಿತ ಉದ್ಯೋಗಿಯ ಕಚೇರಿ ಪ್ರದೇಶಗಳನ್ನು ನಿಯಮಿತವಾಗಿ ಸೋಂಕುರಹಿತಗೊಳಿಸಲಾಗುತ್ತಿದೆ. ಜತೆಗೆ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವ ಸಿಬ್ಬಂದಿಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ, ಎಂದು ಹೇಳಲಾಗಿದೆ.ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಏಪ್ರಿಲ್ ಆರಂಭದಲ್ಲಿ ರಾಜಧಾನಿ ಒಸಾಕಾ ಮತ್ತು ಇತರ ಐದು ಪ್ರಾಂತಗಳಿಗೆ ತುರ್ತು ಪರಿಸ್ಥಿತಿ ಘೋಷಿಸಿದ ನಂತರ ಟೋಕಿಯೊ 2020 ಉದ್ಯೋಗಿಗಳನ್ನು ಮನೆಯಲ್ಲಿ ಕೆಲಸ ಮಾಡಲು ತಿಳಿಸಲಾಗಿದೆ."ಕಚೇರಿಯಲ್ಲಿ ದೈಹಿಕ ಉಪಸ್ಥಿತಿಯ ಅಗತ್ಯವಿರುವ ಕೆಲಸವನ್ನು ಸಂಪೂರ್ಣ ಕನಿಷ್ಠಕ್ಕೆ ಇಳಿಸಲಾಗುವುದು, ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಸಂಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ," ಎಂದು ಸಂಘಟಕರು ಏಪ್ರಿಲ್ 7 ರಂದು ತಿಳಿಸಿದ್ದಾರೆ.