ಮಾಸ್ಕೋ, ಜೂ 3, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಜಾರಿಗೊಳಿಸಿದ್ದ ಲಾಕ್ ಡೌನ್ ಹಾಗೂ ನಿರ್ಬಂಧಗಳನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಹಿಂಪಡೆಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಓ) ಯೂರೋಪ್ ನ ಪ್ರಾದೇಶಿಕ ನಿರ್ದೇಶಕ ಹಾನ್ಸ್ ಕ್ಲುಗೆ, ಸೋಂಕಿನ ಎರಡನೇ ಅಲೆಯ ಹೊಡೆತ ಅತ್ಯಂತ ಅಪಾಯಕಾರಿಯಾಗಿರಲಿದೆ ಎಂದಿದೆ.
ಆನ್ ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕಿನ ಎರಡನೇ ಅಲೆಗೆ ಅವಕಾಶ ನೀಡಲಾಗದು. ಆದರೆ, ಹೆಚ್ಚು ದೇಶಗಳು ನಿರ್ಬಂಧಗಳನ್ನು ಹಿಂಪಡೆಯುತ್ತಿವೆ. ಇದರಿಂದ ಸೋಂಕು ಮತ್ತೊಮ್ಮೆ ಹರಡುವ ಸಾಧ್ಯತೆಯಿದೆ. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ, ಸೋಂಕಿನ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿರಬಹುದು. ವರ್ಷದ ಆರಂಭಕ್ಕೆ ಹೋಲಿಸಿದರೆ ಈಗಿನ ಪರಿಸ್ಥಿತಿ ಉತ್ತಮವಾಗಿದೆ ಎಂಬುದನ್ನು ನಾವು ಮರೆಯಬಾರದು ಎಂದಿದ್ದಾರೆ.