ಕೋವಿಡ್ 19 ಹಿನ್ನೆಲೆ: ಸಂಕಷ್ಟದಲ್ಲಿರುವ ಪೋಷಕರಿಗೆ ವಿದ್ಯಾರ್ಥಿ ವೇತನ - ವಿಬ್ ಗಯಾರ್ ಶಿಕ್ಷಣ ಸಂಸ್ಥೆ ತೀರ್ಮಾನ

 ಬೆಂಗಳೂರು, ಜೂ 2,ಕೋವಿಡ್ -19 ಸಂಕಷ್ಟ ಸಂದರ್ಭದಲ್ಲಿ ಪೋಷಕರಿಗೆ ಹಣಕಾಸಿನ ನೆರವು ನೀಡಲು ವಿಬ್ ಗಯಾರ್ ಶಿಕ್ಷಣ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ “ ವಿಬ್ ಗಯಾರ್ ಎಜುಬ್ರಿಡ್ಜ್ ಸ್ಕಾಲರ್ ಶಿಪ್" ಕಾರ್ಯಕ್ರಮ ಆರಂಭಿಸಿದೆ.ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಪೋಷಕರಿಗೆ ನೆರವು ನೀಡಲು ವಿನೂತನ ರೀತಿಯಲ್ಲಿ ವಿದ್ಯಾರ್ಥಿವೇತನ ಕಾರ್ಯಕ್ರಮ ಪ್ರಾರಂಭಿಸಿದ್ದು, ದೇಶಾದ್ಯಂತ ಇರುವ 38  ಶಾಲೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ. 

ಲಾಕ್ ಡೌನ್ ಸಂಕಷ್ಟಕ್ಕೀಡಾಗಿ ಆರ್ಥಿಕ ತೊಂದರೆ ಎದುರುಸುತ್ತಿರುವ ಪೋಷಕರಿಗೆ ನೆರವು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ವಿಬ್ ಗಯಾರ್ ನ  ತಜ್ಞರ ತಂಡ ವಿದ್ಯಾರ್ಥಿವೇತನದ ರೂಪುರೇಷೆಯನ್ನು ವಿನ್ಯಾಸಗೊಳಿಸಿದೆ. ಕೇವಲ ಏಳು ದಿನಗಳಲ್ಲಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನ ಜಾರಿಗೊಳಿಸಿ ಪೋಷಕರಿಗೆ ಬೆಂಬಲ ಮತ್ತು ಸಹಾಯ ನೀಡಲಿದ್ದು, ಇದಕ್ಕಾಗಿ ಪೋಷಕರ ಆರ್ಥಿಕ ಪರಿಸ್ಥಿತಿಯ ಮೌಲ್ಯಮಾಪನ ಮಾಡಿದ ನಂತರ ವಿದ್ಯಾರ್ಥಿವೇತ ವಿತರಿಸಲಾಗುವುದು ಎಂದು ಹೇಳಿದೆ.