ಕೊವಿಡ್-19: ರಾಷ್ಟ್ರವ್ಯಾಪಿ ಲಾಕ್‌ ಡೌನ್ ನಡುವೆಯೂ ಜೂಮ್ ಕಾರ್ ಸಹಾಯ ಹಸ್ತ

ಬೆಂಗಳೂರು, ಮಾ.30, ಭಾರತದ ಅತಿದೊಡ್ಡ ಸೆಲ್ಫ್-ಡ್ರೈವ್ ಮೊಬಿಲಿಟಿ ವೇದಿಕೆಯಾದ ಜೂಮ್ ಕಾರ್ ಸಂಸ್ಥೆಯು ಲಾಕ್‌ ಡೌನ್ ಸಮಯದಲ್ಲಿ ಎದುರಾಗುವ ತುರ್ತು ಸಾರಿಗೆ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಿದೆ. ಬ್ಯಾಂಕರ್‌ ಗಳು, ಆರೋಗ್ಯ ವೃತ್ತಿಪರರು ಮತ್ತು ವಿತರಣಾ ಅಧಿಕಾರಿಗಳು ಸೇರಿದಂತೆ ಮುಂಚೂಣಿಯ ಉದ್ಯೋಗಿಗಳಿಗೆ ತುರ್ತು ಟ್ರಾನ್ಸ್ ಪೋರ್ಟ್ ಸೇವೆ ಒದಗಿಸುವ ಉದ್ದೇಶದಿಂದ ಸಂಸ್ಥೆಯು ಆಯ್ದ ವಾಹನಗಳನ್ನು ಬಳಸುತ್ತಿದೆ. ಉದ್ಯೋಗಿಗಳಿಗೆ ಸುರಕ್ಷಿತ  ಟ್ರಾನ್ಸ್ ಪೋರ್ಟ್ ಸೌಲಭ್ಯ ಒದಗಿಸುವ ಉದ್ದೇಶದಿಂದ ಸಂಸ್ಥೆಯು ವಿವಿಧ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ ಸಂಸ್ಥೆಗಳು ಅಗತ್ಯ ಸಿಬ್ಬಂದಿಗೆ ಬರಲು ಇರುವ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ನಾಗರಿಕರ ನಿರ್ಣಾಯಕ ದಿನ ಮತ್ತು ತುರ್ತು ಅಗತ್ಯಗಳನ್ನು ಪೂರೈಸಲು ಈ ಸೇವೆಯ ಬಳಕೆ ಮಾಡಿಕೊಳ್ಳುತ್ತಿವೆ.ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸರ್ಕಾರದ ಆದೇಶವನ್ನು ಗಮದಲ್ಲಿಟ್ಟುಕೊಂಡು ಸಂಸ್ಥೆಯು ಒದಗಿಸುತ್ತಿರುವ ಸ್ವಯಂ-ಡ್ರೈವ್ ಸೇವೆಯನ್ನು ಗ್ರಾಹಕರು ಸೇರಿದಂತೆ ಸಂಸ್ಥೆಗಳು ಪ್ರಶಂಸಿಸಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜೂಮ್ ಕಾರ್ ತನ್ನ ಸೇವೆಗೆ ಬಳಸುತ್ತಿರುವ ಎಲ್ಲಾ ಕಾರುಗಳನ್ನು ಸಂಪೂರ್ಣವಾಗಿ ಸ್ಚಚ್ಛಗೊಳಿಸುತ್ತದೆ. ಬ್ಯಾಂಕುಗಳ ಉದ್ಯೋಗಿಗಳೊಂದಿಗೆ ಕೆಲಸ ಮಾಡುವುದರ ಜೊತೆಗೆ ಕಿರಾಣಿ ಅಂಗಡಿ ಸರಪಳಿಗಳ ನೌಕರರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಜೂಮ್ ಕಾರ್ ಸೇವೆ ಒದಗಿಸುತ್ತಿದೆ. ಮೈಸೂರಿನ ಸರ್ಕಾರಿ ಅಧಿಕಾರಿಗಳು ತಮ್ಮ ದೈನಂದಿನ ಟ್ರಾನ್ಸ್ ಪೋರ್ಟ್ ಪರಿಹಾರಕ್ಕಾಗಿ ಜೂಮ್ ಕಾರ್ ಸೇವೆಯನ್ನೇ ಬಳಕೆ ಮಾಡುತ್ತಿದ್ದಾರೆ.
 “ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಕೊರೊನಾ ವೈರಸ್ ಏಕಾಏಕಿ ನಮ್ಮ ಸಮಾಜ ಮತ್ತು ಆರ್ಥಿಕತೆಗೆ ಅಸ್ತಿತ್ವದ ಮೇಲೆ ಬೆದರಿಕೆ ಒಡ್ಡಿದೆ. ಈ ಸವಾಲಿನ ಸಮಯಗಳನ್ನು ನಿಭಾಯಿಸಲು ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯಮಗಳು ಒಗ್ಗೂಡಿ ಸಮಾಜದ ಪ್ರಸ್ತುತ ಅವಶ್ಯಕತೆಗಳಿಗೆ ಅನುರಣಿಸುವ ಪ್ರಾಯೋಗಿಕ ಸಮಗ್ರ ಪರಿಹಾರಗಳನ್ನು ನೀಡಬೇಕಾದ ಅವಶ್ಯಕತೆ ಇದೆ.  ಈ ನಿಟ್ಟಿನಲ್ಲಿ ಜೂಮ್ ಕಾರ್ ಸಂಪೂರ್ಣ ಸ್ವಚ್ಛಗೊಳಿಸಿದ ಸ್ವಯಂ-ಡ್ರೈವ್ ವಾಹನಗಳ ಮೂಲಕ ಸುರಕ್ಷಿತ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಸರ್ಕಾರಿ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ ಮತ್ತು ಅನೇಕ ತುರ್ತು ಕಾರ್ಯಗಳಿಗೆ ವಾಹನದ ಬೇಡಿಕೆ ಬಂದಿರುವುದು ನಮ್ಮ ಗಮನಕ್ಕೆ ಬಂದಿದೆ. ಸುರಕ್ಷಿತ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ದರದಲ್ಲಿ ಟ್ರಾನ್ಸ್ ಪೋರ್ಟ್ ಸೇವೆ ಒದಗಿಸುವ ದಿಸೆಯಲ್ಲಿ ನಮ್ಮ ಗಮನ” ಎಂದು ಜೂಮ್ ಕಾರ್ ಸಂಸ್ಥೆಯ ಸಿಇಒ ಮತ್ತು ಸಹ-ಸಂಸ್ಥಾಪಕ ಗ್ರೆಗ್ ಮೊರನ್ ತಿಳಿಸಿದ್ದಾರೆ. ಕಾರುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದರ ಜೊತೆಗೆ ಉನ್ನತ ಮಟ್ಟದ ಸ್ವಚ್ಛತೆಯನ್ನು ಜೂಮ್ ಕಾರ್ ಪಾಲಿಸುತ್ತದೆ. ಶೇಕಡ 100ರಷ್ಟು ಕೀಲಿ ರಹಿತ ಪ್ರವೇಶವನ್ನು ಜೂಮ್ ಕಾರ್ ಗ್ರಾಹಕರಿಗೆ ಒದಗಿಸತ್ತದೆ.  ಮನುಷ್ಯನ ಸಂಪರ್ಕವಿಲ್ಲದೆ ಗ್ರಾಹಕರು ಜೂಮ್‌ ಕಾರ್ ವಾಹನಗಳ ಸೇವೆಯನ್ನು ಉಪಯೋಗಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.