ಕೋವಿಡ್‌-19: ಸರ್ಕಾರದ ಆದೇಶ ಮೀರಿ ಎನ್‌ಐಆರ್‌ ಮಾಡಿದ ಅವಾಂತರ: ಇಡೀ ಉತ್ತರ ಕೇರಳದಲ್ಲಿ ಸೋಂಕು ಭೀತಿ

ಕಾಸರಗೋಡು, ಮಾ. 23, ಕಳೆದ ವಾರ ತಾಯಿನಾಡಿಗೆ ಮರಳಿದ ಇಲ್ಲಿನ ಪ್ರಮುಖ ಅನಿವಾಸಿ ಭಾರತೀಯರೊಬ್ಬರು, ಕೊರೋನಾ ಸೋಂಕಿನ ತಡೆಗೆ ಸರ್ಕಾರ ನೀಡಿರುವ ಎಲ್ಲಾ ಅಧಿಕೃತ  ನಿರ್ದೇಶನಗಳನ್ನು ಉಲ್ಲಂಘಿಸಿ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಸಮಾಜದೊಂದಿಗೆ ಬೆರೆಯುವ ಮೂಲಕ ಇಡೀ ಉತ್ತರ ಕೇರಳದಾದ್ಯಂತ ಭೀತಿ ಉಂಟಾಗಲು ಕಾರಣರಾಗಿದ್ದಾರೆ.
ಎನ್ಐಆರ್‌ಯನ್ನು ಗುರುವಾರ ಪರೀಕ್ಷಿಸಿದಾಗ ಕೊರೋನಾ ಪಾಸಿಟಿವ್‌ ಕಂಡುಬಂದಿದ್ದು, ಅವರನ್ನು ಇಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ಇರಿಸಲಾಗಿದೆ.ಆದರೆ, ಇದಕ್ಕೂ ಮೊದಲು ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ನೂರಾರು ಜನರೊಂದಿಗೆ ಬೆರೆತಿರುವುದರಿಂದ ಈ ಸ್ಥಳಗಳಲ್ಲಿನ ಜನರಲ್ಲಿ ಈಗ ಆತಂಕ ಮನೆ ಮಾಡಿದೆ.
ಇದಲ್ಲದೆ,  ಮಾರ್ಚ್ 12 ರಂದು ಅವರು ಇಲ್ಲಿಗೆ ಬಂದಾಗಿನಿಂದ ಅವರ ಚಟುವಟಿಕೆ ಮತ್ತು ಸಮಾಜದೊಂದಿಗೆ ಅವರ ಬೆರೆಯುವಿಕೆ ಬಹಳ ವಿಸ್ತಾರವಾದುದರಿಂದ ಈ ಬಗ್ಗೆ ನಕ್ಷೆ ರೂಪಿಸಲು  ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಮಾರ್ಚ್ 11 ರಂದು  ಕರಿಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಧ್ಯವಯಸ್ಕ ಮತ್ತು ಜನಪ್ರಿಯ ಎನ್‌ಆರ್‌ಐ,  ಮಾವೇಲಿ ಎಕ್ಸ್‌ಪ್ರೆಸ್ ಹತ್ತುವ ಮೊದಲು ಮಧ್ಯರಾತ್ರಿಯವರೆಗೆ ಕ್ಯಾಲಿಕಟ್‌ನಲ್ಲಿದ್ದರು, ಬಳಿಕ ಅವರು ಕ್ಯಾಲಿಕಟ್‌ನಿಂದ 160 ಕಿ.ಮೀ ದೂರದಲ್ಲಿರುವ ತಮ್ಮ ತಾಯಿನಾಡು ಕಾಸರಗೋಡಿಗೆ ತಲುಪಿಸಿದರು. ಈಗ, ಅಧಿಕಾರಿಗಳು ಬೋಗಿ  ಎಸ್ 9 ನಲ್ಲಿ ಪ್ರಯಾಣಿಸಿದ ಇತರ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಮತ್ತು ಕ್ಯಾಲಿಕಟ್‌ನಲ್ಲಿ ಅವರ ಚಟುವಟಿಕೆಗಳು ಮತ್ತು ಪ್ರಯಾಣದ  ವಿವರಗಳನ್ನು ಸಹ  ತನಿಖೆ ಮಾಡುತ್ತಿದ್ದಾರೆ.

ಅನಿವಾಸಿ ಭಾರತೀಯ,  ಕಾಸರಗೋಡಿನ ಹಲವೆಡೆ ಹಲವು ಜನರನ್ನು ಭೇಟಿಯಾಗುತ್ತಿದ್ದರು. ಕಳೆದ ಏಳು ದಿನಗಳಲ್ಲಿ ಅವರು  ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಹಾಜರಾಗಿದ್ದರು  ಎಂದು ವರದಿಗಳು ತಿಳಿಸಿವೆ.ಈ ಅವಧಿಯಲ್ಲಿ  ಅವರು ಕಾಸರಗೋಡು ಮತ್ತು ಮಂಜೇಶ್ವರಂ ಶಾಸಕರನ್ನು ಭೇಟಿಯಾಗಿದ್ದಾರೆ. ಪಾಸಿಟಿವ್ ಪರೀಕ್ಷೆಗೆ ಒಳಪಡುವ ಮೊದಲು ಮತ್ತು ಪ್ರತ್ಯೇಕ ವಾರ್ಡ್‌ಗೆ ಪ್ರವೇಶಿಸುವ ಮೊದಲು ಅವರು ಶಾಸಕರೊಂದಿಗೆ ಕೈಕುಲುಕಿದ್ದಾರೆ ಅಥವಾ ತಬ್ಬಿಕೊಂಡಿದ್ದಾರೆ.ಈ ವಲಸಿಗ ಪಾಸಿಟಿವ್ ವರದಿಯ ಪರಿಣಾಮವಾಗಿ, ಮಂಜೇಶ್ವರಂ ಶಾಸಕ ಎಂ. ಸಿ. ಖಮರುದ್ದೀನ್‌ ಮತ್ತು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕ್ಕುನ್ನು ಅವರನ್ನು ಮನೆ ಸಂಪರ್ಕತಡೆಯಲ್ಲಿ ಇರಿಸಲಾಗಿದೆ.ಸೋಂಕಿತ ಎನ್‌ಆರ್‌ಐ ಜೊತೆ ಈ ಇಬ್ಬರು ಶಾಸಕರು ಭೇಟಿಯಾಗಿ ಕೈಕುಲುಕಿದ ಕಾರಣ ಸೋಂಕು ಮತ್ತಷ್ಟು ಹರಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಎನ್‌ಆರ್‌ಐ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಗುರುತಿಸಿ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಆರೋಗ್ಯ  ಅಧಿಕಾರಿಗಳು, ಜಿಲ್ಲಾಡಳಿತದ ಸಹಯೋಗದೊಂದಿಗೆ ಪ್ರಯತ್ನಿಸುತ್ತಿದ್ದಾರೆ.ಇದು ನೂರಾರು ಸಂಖ್ಯೆಯಲ್ಲಿ ಇರಬಹುದು. ಇದು ಯಾವ ಮಟ್ಟಕ್ಕೆ ತಲುಪಬಹುದು ಎಂಬುದರ ಬಗ್ಗೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.