ಮಾಸ್ಕೋ, ಜೂನ್ 22, ಜರ್ಮನಿಯಲ್ಲಿ ಕೋವಿಡ್-19 ಕೊರೊನಾ ವೈರಸ್ ಪೀಡಿತರ ಸಂಖ್ಯೆ 1,90,359ಕ್ಕೆ ಏರಿಕೆ ಆಗಿದೆ. ಒಂದೇ ದಿನದಲ್ಲಿ 537 ಸೋಂಕಿತರು ಕಾಣಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಭಾನುವಾರಕ್ಕೆ ಹೋಲಿಸಿದರೆ, ಪೀಡಿತರ ಸಂಖ್ಯೆ ದೇಶದಲ್ಲಿ ಇಳಿ ಮುಖವಾಗಿದೆ. ದೇಶದಲ್ಲಿ ಭಾನುವಾರ 687 ಪೀಡಿತರು ಪತ್ತೆಯಾಗಿದ್ದರು.ಜರ್ಮನಿಯಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 8,885 ಆಗಿದೆ. 1.75 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ಜರ್ಮನಿಯ ಹೆಚ್ಚಿನ ಕೋವಿಡ್-19 ಪ್ರಕರಣಗಳು (47,867) ಬವೇರಿಯಾದಲ್ಲಿ ಕಂಡು ಬಂದಿವೆ. ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ 7,883 ಪ್ರಕರಣಗಳು ಪತ್ತೆಯಾಗಿವೆ.