ಕೊವಿಡ್-19: ಪಾಕಿಸ್ತಾನದಲ್ಲಿ 2,000 ದಾಟಿದ ಸಾವಿನ ಸಂಖ್ಯೆ

ಇಸ್ಲಾಮಾಬಾದ್, ಜೂನ್ 7, ಪಾಕಿಸ್ತಾನದಲ್ಲಿ ಕೊವಿಡ್‍-19 ಸೋಂಕಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ 98,943 ತಲುಪಿದ್ದು, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 2,002 ಕ್ಕೆ ಏರಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಭಾನುವಾರ ಬೆಳಿಗ್ಗೆ ತನ್ನ ನವೀಕರಿಸಿದ ಮಾಹಿತಿಯಲ್ಲಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 4,960 ಹೊಸ ಪ್ರಕರಣಗಳು ಮತ್ತು 67 ಸಾವುಗಳು ವರದಿಯಾಗಿವೆ ಒಟ್ಟು ದೃಢಪಟ್ಟ ಪ್ರಕರಣಗಳ ಪೈಕಿ ಚೇತರಿಕೆ ಪ್ರಮಾಣ ಶೇ 33.8ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.ದೇಶದ ಪೂರ್ವ ಪಂಜಾಬ್ ಪ್ರಾಂತ್ಯ  37,090 ಪ್ರಕರಣಗಳೊಂದಿಗೆ ಹೆಚ್ಚು ಬಾಧಿತ ಪ್ರದೇಶವಾಗಿದ್ದು, ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ 36,364 ಪ್ರಕರಣಗಳು ವರದಿಯಾಗಿವೆ.ಕೊವಿಡ್‍-19 ವಿರುದ್ಧ ಸರ್ಕಾರ ರೂಪಿಸಿರುವ ಪ್ರಮಾಣಿತ ಕಾರ್ಯಾಚರಣಾ ನಿಯಮಾವಳಿಗಳನ್ನು ಅನುಸರಿಸುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಜನರಿಗೆ ಸೂಚಿಸಿದ್ದಾರೆ.