ಬರ್ಲಿನ್, ಏ.22 , ಕೊರೊನಾ ವೈರಸ್‌ನ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಜನಸಂದಣಿಯನ್ನು ನಿಷೇಧಿಸಿದ್ದರಿಂದ ಈ ವರ್ಷ ಸೆಪ್ಟೆಂಬರ್ 27 ರಂದು ನಡೆಯಬೇಕಿದ್ದ ಬರ್ಲಿನ್ ಮ್ಯಾರಥಾನ್ ಅನ್ನು ಮುಂದೂಡುವ ನಿರ್ಧಾರ.ಸಂಘಟಕರು ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಅಲ್ಲದೆ ಇನ್ನು ಹೊಸ ದಿನಾಂಕದ ಘೋಷಣೆ ಆಗಬೇಕಿದೆ. "ಅಕ್ಟೋಬರ್ 24 ರವರೆಗೆ 5000 ಕ್ಕೂ ಹೆಚ್ಚು ಜನ ಸೇರುವಂತಹ ಕಾರ್ಯಕ್ರಮವನ್ನು ನಿಷೇಧಿಸಲಾಗಿದೆ ಎಂದು ನಾವು ತಿಳಿದುಕೊಂಡಿದ್ದೇವೆ, ಇದರಿಂದಾಗಿ ಸೆಪ್ಟೆಂಬರ್ 26-27ರಂದು ಬರ್ಲಿನ್ ಮ್ಯಾರಥಾನ್ ಆಯೋಜಿಸಲು ನಮಗೆ ಸಾಧ್ಯವಾಗುವುದಿಲ್ಲ" ಎಂದು ತಿಳಿಸಿದೆ. ಕೊರೊನಾ ವೈರಸ್‌ನಿಂದಾಗಿ, ಪ್ರಪಂಚದಾದ್ಯಂತ ಅನೇಕ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ.