ಚಂಡೀಗಡ, ಏ.7, ಪಂಜಾಬ್‌ನಲ್ಲಿ ಹೊಸದಾಗಿ 12 ಕೋವಿಡ್ -19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಮಂಗಳವಾರ ಸೋಂಕಿತರ ಸಂಖ್ಯೆ 91ಕ್ಕೇರಿದೆ.ಮಾರಣಾಂತಿಕ ವೈರಸ್‌ಗೆ ಇದುವರೆಗೆ ರಾಜ್ಯದಲ್ಲಿ 8 ಮಂದಿ ಅಸುನೀಗಿದ್ದಾರೆ.ಹೊಸ ಹನ್ನೆರಡು ಪ್ರಕರಣಗಳ ಪೈಕಿ ಎಸ್‌ಎಎಸ್ ನಗರ (ಮೊಹಾಲಿ) ಜಿಲ್ಲೆಯಲ್ಲಿ ಏಳು, ಮಾನ್ಸಾದಲ್ಲಿ ಎರಡು ಮತ್ತು ಅಮೃತಸರ, ಮೊಗಾ ಮತ್ತು ಪಠಾಣ್‌ಕೋಟ್ ಜಿಲ್ಲೆಗಳಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.ಎಸ್‌ಎಎಸ್ ನಗರದ ಜವಾಹರಪುರ ಗ್ರಾಮದಲ್ಲಿ ಒಟ್ಟು ಏಳು ಹೊಸ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತವು ಇಡೀ ಗ್ರಾಮವನ್ನು ಬಂದ್ ಮಾಡಿದೆ.
ಅಮೃತಸರ ಮುನ್ಸಿಪಲ್ ಕಾರ್ಪೊರೇಶನ್‌ನ ಮಾಜಿ ಸಹಾಯಕ ಆಯುಕ್ತರ ಪತ್ನಿಯಲ್ಲಿ ಸೋಂಕಿನ ಪಾಸಿಟಿವ್ ಕಂಡುಬಂದಿದ್ದು, ಅವರು ಸೋಮವಾರ ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪಠಾಣ್‌ಕೋಟ್ ಜಿಲ್ಲೆಯ ಸುಜನ್‌ಪುರ ಪಟ್ಟಣದಲ್ಲಿ 77 ವರ್ಷದ ವ್ಯಕ್ತಿಯೊಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ. ಅವರು ಪಾಸಿಟಿವ್ ಸೋಂಕು ಇದ್ದ ಮಹಿಳೆಯ ಪತಿಯಾಗಿದ್ದಾರೆ. ಇದರೊಂದಿಗೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತಿ ಹೆಚ್ಚು, ಎಸ್‌ಎಎಸ್ ನಗರ ಜಿಲ್ಲೆಯಲ್ಲಿ ಒಟ್ಟು 26 ಪ್ರಕರಣಗಳು ಪತ್ತೆಯಾದಂತಾಗಿದೆ. ಎಸ್‌ಬಿಎಸ್ ನಗರ 19, ಅಮೃತಸರ ಹತ್ತು, ಹೋಶಿಯಾರ್‌ಪುರ ಏಳು, ಲುಧಿಯಾನ ಮತ್ತು ಜಲಂಧರ್ ಜಿಲ್ಲೆಗಳಲ್ಲಿ ತಲಾ ಆರು, ಮಾನಸಾದಲ್ಲಿ ಐದು ಪ್ರಕರಣಗಳು ದಾಖಲಾಗಿವೆ.ಫತೇಘರ್ ಮತ್ತು ಪಠಾಣ್‌ಕೋಟ್ ಜಿಲ್ಲೆಗಳಲ್ಲಿ ತಲಾ ಎರಡು ಪ್ರಕರಣಗಳಿದ್ದು, ಫರೀದ್‌ಕೋಟ್, ಮೊಗಾ, ಪಟಿಯಾಲ, ಕಪುರ್ಥಾಲಾ ಮತ್ತು ಬರ್ನಾಲ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.