ನವದೆಹಲಿ, ಏಪ್ರಿಲ್ 15, ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಬುಧವಾರ ಬೆಳಿಗ್ಗೆ ಕೊರೋನಾ ವೈರಸ್ ಪ್ರಕರಣಗಳು ದೇಶದಲ್ಲಿ 11,000 ದಾಟಿ, 11439ಕ್ಕೆ ತಲುಪಿದೆ.ಮಂಗಳವಾರ ಸಂಜೆಯಿಂದ 24 ಹೊಸ ಸಾವು ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 377 ಕ್ಕೆ ಏರಿಕೆಯಾಗಿದೆ.ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು ಸಹ 9,756ಕ್ಕೆ ಏರಿದ್ದು, ಕಳೆದ ಸಂಜೆಯಿಂದ 484 ಹೊಸ ಪ್ರಕರಣಗಳು ವರದಿಯಾಗಿವೆ.ಕೋವಿಡ್-19 ಗುಣಪಡಿಸಿದ ಮತ್ತು ಬಿಡುಗಡೆಯಾದ ಪ್ರಕರಣಗಳ ಸಂಖ್ಯೆ ಈಗ ರಾಷ್ಟ್ರದಾದ್ಯಂತ 1,305 ರಷ್ಟಿದೆ ಎಂದು ಅಂಕಿ ಅಂಶ ತಿಳಿಸಿದೆ.ದೇಶದ ಅತ್ಯಂತ ಹೆಚ್ಚು ಹಾನಿಯಾಗಿರುವ ಮಹಾರಾಷ್ಟ್ರದಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೆ ಹೊಸ ಪ್ರಕರಣಗಳು ಕಂಡುಬಂದಿವೆ.
ದೃಢಪಡಿಸಿದ ಪ್ರಕರಣಗಳ ಸಂಖ್ಯೆ 2,687ಕ್ಕೆ ಏರಿಕೆಯಾಗಿದ್ದು, ಹತ್ತು ಹೊಸ ಸಾವುಗಳು ಸಂಭವಿಸಿದೆ. ಇದರೊಂದಿಗೆ ಇಲ್ಲಿಯವರೆಗೆ ಸಾವಿನ ಸಂಖ್ಯೆ 170ಕ್ಕೆ ತಲುಪಿದೆ, ನಂತರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈಗ 1,561 ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 30 ಸಾವು ಸಂಭವಿಸಿದೆ.ತಮಿಳುನಾಡು ಮತ್ತು ರಾಜಸ್ಥಾನದಲ್ಲಿ ಸೋಂಕಿನ ಸಂಖ್ಯೆಗಳು ಕ್ರಮವಾಗಿ 1,204 ಮತ್ತು 969 ರಷ್ಟಿದ್ದರೆ, ಮಧ್ಯಪ್ರದೇಶದಲ್ಲಿ ಸೋಂಕಿನ ಸಂಖ್ಯೆ 730ರಷ್ಟಿದ್ದು, 50 ಸಾವು ಸಂಭವಿಸಿದೆ.ಕಳೆದ ಎರಡು ಮೂರು ದಿನಗಳಲ್ಲಿ ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ರಾಜಸ್ಥಾನಗಳಲ್ಲಿ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ ಎಂಬುದನ್ನು ಅಂಕಿಅಂಶಗಳು ತೋರಿಸುತ್ತವೆ.