ಕೊವಿದ್‍-19- ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದ ಉದ್ಯೋಗಿಗೆ ಇನ್ಫೋಸಿಸ್‍ ಗೇಟ್‍ಪಾಸ್‍

ಬೆಂಗಳೂರು, ಮಾರ್ಚ್ 28,ಕರೋನವೈರಸ್ ಹರಡಲು ಸಾರ್ವಜನಿಕವಾಗಿ ಸೀನುವಂತೆ ಜನರಿಗೆ  ಫೇಸ್‍ಬುಕ್‍ನಲ್ಲಿ ಕರೆ ನೀಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಇನ್ಫೋಸಿಸ್‍ ತಿಳಿಸಿದೆ.ಪೋಸ್ಟ್ ಮಾಡಿರುವುದು ತನಿಖೆಯಿಂದ ದೃಢಪಟ್ಟ ನಂತರ ಉದ್ಯೋಗಿ ಮುಜೀಬ್ ಮೊಹಮ್ಮದ್ ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಮಾಹಿತಿ ತಂತ್ರಜ್ಞಾನ ದೈತ್ಯ ಕಂಪೆನಿ ಇನ್ಫೋಸಿಸ್‍ ಹೇಳಿದೆ. ಉದ್ಯೋಗಿಯ ಸಾಮಾಜಿಕ ಮಾಧ್ಯಮ ಪೋಸ್ಟ್ ಇನ್ಫೋಸಿಸ್ ನೀತಿ ಸಂಹಿತೆ ಮತ್ತು ಜವಾಬ್ದಾರಿಯುತ ಕೆಲಸದ ಬದ್ಧತೆಗೆ ವಿರುದ್ಧವಾಗಿದೆ. ಇಂತಹ ಕೃತ್ಯಗಳ ಬಗ್ಗೆ ಶೂನ್ಯ ಸಹಿಷ್ಣುತೆ ತೋರಲಾಗುವುದು ಎಂದು ಶುಕ್ರವಾರ ಕಂಪೆನಿ ಟ್ವೀಟ್ ಮಾಡಿದೆ. ‘ಬನ್ನಿ ಕೈಜೋಡಿಸೋಣ, ಹೊರಗೆ ಹೋಗಿ ಸಾರ್ವಜನಿಕವಾಗಿ ಬಾಯಿ ತೆರದು ಸೀನಿರಿ. ವೈರಸ್ ಹರಡಿ.’ ಎಂದು ಮೊಹಮ್ಮದ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ.  ಈತನನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ.