ಲೋಕದರ್ಶನ ವರದಿ
ಕೊಪ್ಪಳ 28: ಜಗದ್ಗುರು ಸಿದ್ದಾರೂಢ ಮಹಾಸ್ವಾಮಿಗಳವರ ಜಯಂತ್ಯುತ್ಸವದ ಅಂಗವಾಗಿ ರಾಜ್ಯ ಮಟ್ಟದ ಭಜನಾ ಸ್ವರ್ಧೆ ಏರ್ಪಡಿಸಲಾಗಿದೆ, ಸ್ವರ್ಧೆ ಯಲ್ಲಿ ಭಾಗವಹಿಸುವ ತಂಡದವರು ದಿ. 02. ಏಪ್ರೀಲ್ ರೋಳಗಾಗಿ ಶ್ರೀಮಠದ ಟ್ರಸ್ಟ್ ಕಮೀಟಿಯ ಕಾಯರ್ಾಲಯದಲ್ಲಿ ಹೆಸರು ನೊಂದಾಯಿಸಬಹುದು ಎಂದು ಸಿ.ಸ್ವಾ.ಮ.ಟ್ರ.ಕಮೀಟಿಯ ಚೇರ್ಮೇನ್ ಡಿ.ಡಿ.ಮಾಳಗಿ ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಭಜನಾ ಸ್ವರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಪದಗಳನ್ನು ಹಾಡುವ ಅವಕಾಶವಿದ್ದು, ಮೂರು ಪದಗಳನ್ನು 18 ನಿಮಿಷಗಳಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಖಡ್ಡಾಯವಾಗಿ ಹಾಡಬೆಕು. ಪ್ರತಿ ತಂಡದವರು ಮೂರನೆ ಪದವನ್ನು ಜಗದ್ಗುರು ಸಿದ್ಧರೂಡರ ಮೇಲಿನ ಪದ್ಯ, ದಾಸರ ಪದ್ಯ, ಹಾಗೂ ವಚನ ಸಾಹಿತ್ಯ ಇವುಗಳಲ್ಲಿ ಯಾವುದಾದರೊಂದು ಹಾಡಬಹುದು ಇಲ್ಲವೆ ಮೂರು ಪದ್ಯಗಳನ್ನು ಕೈವಲ್ಯ ಸಾಹಿತ್ಯದಲ್ಲಿ ಹಾಡಬಹುದು. ಸಿದ್ದರೂಢರ ಮೇಲಿನ ಪದ್ಯ, ದಾಸರ ಪದ್ಯ, ಶಿಶುನಾಳ ಶರೀಫರ ಪದ್ಯ ಹಾಡುವವರು ಇಲ್ಲವೆ ಕೈವಲ್ಯ ಸಾಹಿತ್ಯದಲಿ ಹಾಡಬಹುದು. ತಾವು ಹಾಡುವ ಪದ್ಯದ ಹೆಸರು, ರಚಿತರ ಹೆಸರು, ರಾಗ, ತಾಳದ ವಿವರವನ್ನು ಒಂದುಹಾಳೆಯಲ್ಲಿ ಬರೆದು ನಿಣರ್ಾಯಕರ ಕಡೆ ಕೊಟ್ಟು ಹಾಡಬೇಕು. ಜಾನಪದ ಹಾಗು ಸಿನಿಮಾ ಶೈಲಿಯಲ್ಲಿ ಹಾಡುವವರಿಗೆ ಅವಕಾಶವಿಲ್ಲಾ. ಒಂದು ಸ್ವಧೆರ್ೆಯಲ್ಲಿ ಭಾಗವಹಿಸುವ ತಂಡದ ಕಲಾವಿವರದ ಸಂಖ್ಯೆ 6ಕ್ಕಿಂತ ಹೆಚ್ಚು 10ಕ್ಕಿಂತ ಕಡಿಮೆ ಇರಬೇಕು. ಒಂದು ತಂಡದಲ್ಲಿ ಭಾಗವಹಿಸಿದವರು ಮತ್ತೊಂದು ತಂಡದಲ್ಲಿ ಬಾಗವಹಿಸುವಂತಿಲ್ಲಾ, ಆದರೆ ತಬಲ, ಹಾಮರ್ೋನಿಯಮ್, ತಾಳ,ದಮಡಿ, ವಾದಕರಿಗೆ ಮಾತ್ರಾ 2 ತಂಡ ಗಳಲ್ಲಿ ಬಾಗವಹಿಸಬಹುದು. ಇನ್ನುಳಿದ ನಿಯಮಗಳನ್ನು ಸ್ವರ್ದ ಸ್ಥಳದಲ್ಲಿ ಎಲ್ಲಾ ತಂಡದವರಿಗೆ ತಿಳಿಸಲಾಗುವುದು. ಸ್ವರ್ಧೆಯ ಸಂದರ್ಭದಲ್ಲಿ ಯಾವುದೆ ಸಮಸ್ಯೆಗಳು ಬಂದಲ್ಲಿ ನಿಣಾಯಕರ ಸಿದ್ದರೂಡ ಸ್ವಾಮಿಯವರ ಟ್ರಷ್ಟ್ನ ನಿರ್ಧಾರವೇ ಅಂತಿಮ ನಿರ್ಧಾರವಾಗುತದೆ, ಇದರಿಲ್ಲಿ ಬೇರೆಯವರಿಗೆ ಅವಕಾಶವಿಲ್ಲಾ, ಪ್ರಥಮ ಬಹುಮಾನ ರೂ; 80.000=00 ದ್ವಿತಿಯ ಬಹುಮಾನ ರೂ. 60,000=00 ತೃತಿಯ ಬಹುಮಾನ ರೂ. 50,000=00 ಸಮಾಧಾನಕರ ಬಹುಮಾನ ಹತ್ತು ತಂಡಗಳನ್ನು ಅಯ್ಕೆಮಾಡಿ ಒಂದೊಂದು ತಂಡಕ್ಕೆ 7,000=00 ನೀಡಲಾಗುವುದು. ಈ ನಿಯಮ ಬದ್ದವಿರುವ ತಂಡದವರು ದಿ. 02.ಏಪೀಲ್ 2019ರ ಒಳಗೆ ಮಠದ ಕಾರ್ಯಲಯದಲ್ಲಿ ಪ್ರವೇಶ ಶುಲ್ಕ ರೂ 300 ರೂಪಾಯಿ ತುಂಬಿ ತಮ್ಮ ಹೆಸರು ನೊಂದಾಯಿಸಬೇಕು, ಹೆಚ್ಚಿನ ಮಾಹಿತಿಗಾಗಿ ಶಾಮಾನಂದ ಬಾ ಪೂಜಾರಿ ಸಧ್ಯಕ್ಷರು ರಾಜ್ಯ ಮಟ್ಟದ ಭಜನಾ ಸ್ಪಧರ್ೆ ಹಾಗೂ ಧರ್ಮದಶರ್ಿಗಳು ಮೋ. 9620693060, 9880169881. ಇವರಿಗೆ ಸಂಪಕರ್ಿಸಬಹುದಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಧರ್ಮದರ್ಶಿ ಜಿ.ಎಸ್. ನಾಯ್ಕ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.