ಲೋಕದರ್ಶನ ವರದಿ
ಕೂಡ್ಲಿಗಿ 20: ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ 10-12 ವರ್ಷಗಳಿಂದಲೂ ಆರೋಗ್ಯ ಉಪಕೇಂದ್ರ ಕಟ್ಟಡವಿದ್ದರೂ ನರ್ಸ್ ವಾಸಿಸುತ್ತಿಲ್ಲ. ಹಾಗಾಗಿ ರೋಗ್ಯ ಉಪಕೇಂದ್ರ ಕಟ್ಟಡ ಇದ್ದೂ ಇಲ್ಲದಂತೆ ನಿರರ್ಥಕವಾಗಿದೆ. ಆರೋಗ್ಯ ಉಪಕೇಂದ್ರದಲ್ಲಿ ನರ್ಸ್ ಇರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
5 ಹಳ್ಳಿಗಳು ಬಣವಿಕಲ್ಲು ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುತ್ತವೆ. 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ರಾಷ್ಟ್ರೀಯ ಹೆದ್ದಾರಿ 50 ಸಹ ಈ ಗ್ರಾಮದ ಮೂಲಕವೇ ಹಾದು ಹೋಗಿದೆ. ಅಲ್ಲದೇ ಈ ಗ್ರಾಮದಲ್ಲಿ 100ಕ್ಕೂ ಹೆಚ್ಚು ಬಾಲಕಿಯರಿರುವ ಕಸ್ತೂರಿಬಾ ವಸತಿ ಶಾಲೆ ಇದೆ. ರಾತ್ರಿ ಸಮಯದಲ್ಲಿ ಆರೋಗ್ಯ ಸಮಸ್ಯೆ ಬಂದರೆ ಪ್ರಥಮ ಚಿಕಿತ್ಸೆಗೆ ನರ್ಸ್ ಇಲ್ಲ ಎಂದರೆ ಹೇಗೆ? ಪ್ರಥಮ ಚಿಕಿತ್ಸೆಗೂ 15ರಿಂದ 20 ಕಿಮೀ ದೂರದ ಕೂಡ್ಲಿಗಿ ಮತ್ತು ಹೊಸಹಳ್ಳಿಗೆ ಹೋಗಬೇಕಾಗುತ್ತದೆ. ಹಾಗಾಗಿ ಆರೋಗ್ಯ ಉಪಕೇಂದ್ರದಲ್ಲಿ ನಸರ್್ ಇರುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ತರು ಆಗ್ರಹಿಸಿದರು.
ಬಣವಿಕಲ್ಲು ಗ್ರಾಮದಲ್ಲಿ 2 ಆರೋಗ್ಯ ಉಪಕೇಂದ್ರ ಕಟ್ಟಡಗಳಿದ್ದರೂ 4 ವರ್ಷಗಳಿಂದಲೂ ಒಬ್ಬ ನಸರ್್ ಇಲ್ಲ. ಆರೋಗ್ಯ ತೊಂದರೆಯಾದರೆ ಪ್ರಥಮಚಿಕಿತ್ಸೆಗೂ ಆರೋಗ್ಯ ಉಪಕೇಂದ್ರವಿದ್ದರೂ ಪ್ರಯೋಜನವಿಲ್ಲದಂತಾಗಿದೆ.