ಲೋಕದರ್ಶನ ವರದಿ
ಕೂಡ್ಲಿಗಿ 26: ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ಎಸ್. ಮಹಾಬಲೇಶ್ವರ ಹೇಳಿದರು. ಪಟ್ಟಣದಲ್ಲಿ ಪಾಸ್ಟಿಕ್ ಬಳಕೆಯನ್ನು ಕಟ್ಟು ನಿಟ್ಟಾಗಿ ಜಾರಿ ಮಾಡುವ ಕುರಿತು ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವ್ಯಾಪಾರಸ್ಥರು ಮತ್ತು ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು.
ಅ.2ರಿಂದ ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧ ಮಾಡುವ ಬಗ್ಗೆ ಕೇಂದ್ರ ಸಕರ್ಾದ ದೃಡ ನಿರ್ಧರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಪ್ಲಾಸ್ಟಿಕ್ ನಿಷೇದ ಮಾಡಲಾಗಿದೆ. ಇದಕ್ಕೆ ಎಲ್ಲಾ ಕಿರಾಣಿ, ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು ಸಹಕಾರ ನೀಡಬೇಕು
ವ್ಯಾಪಾರಿಗಳು, ಸಾರ್ವಜನಿಕರು ತಮ್ಮಲ್ಲಿ ಉಂಟಾಗುವ ತ್ಯಾಜ್ಯ, ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಒಂದು ಕಡೆ ಸಂಗ್ರಹ ಮಾಡಿಟ್ಟುಕೊಳ್ಳವ ಮೂಲಕ ಸ್ವಚ್ಚ ನಗರಕ್ಕೆ ಅಧ್ಯತೆ ನೀಡಬೇಕು. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳು ತಮ್ಮ ಸುತ್ತಲಿನ ಪರಿಸರವನ್ನು ಸುಂದರವಾಗಿಟ್ಟುಕೊಳ್ಳಬೇಕು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪಕೃದ್ಧೀನ್ ಸಾಬ್ ಮಾತನಾಡಿ, ಪ್ಲಾಸ್ಟೀಕ್ ಬಳಕೆಯನ್ನು ಕಟ್ಟು ನಿಟ್ಟಾಗಿ ನಿಷೇದ ಮಾಡಲಾಗಿದ್ದು, ಇಂದಿನಿಂದಲೇ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.
ಹಾಲು, ಉಪ್ಪು, ಎಣ್ಣೆಗಳಂತಹ ಅನೇಕ ವಸ್ತುಗಳು ಪ್ಲಾಸ್ಟಿಕ್ ಪ್ಯಾಕಿನಲ್ಲಿ ಬರುತ್ತವೆ. ಅವುಗಳನ್ನು ಏಕೆ? ನಿಷೇಧ ಮಾಡಿಲ್ಲ ಎಂದು ವ್ಯಾಪಾರಿ ಬಾಲರಾಜ್ ಪ್ರಶ್ನೆ ಮಾಡಿದರೆ, ಅಂಗಡಿಯಲ್ಲಿ ಈಗ ಸ್ಟಾಕ್ ಇಟ್ಟುಕೊಂಡಿರುವ ಪ್ಲಾಸ್ಟಿಕ್ನ್ನು ಉಪಯೋಗಿಸಲು ಕಾಲಾವಕಾಶ ಕೊಡಿ ಎಂದು ಕಿರಾಣಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಘಂಟಿ ರಾಘಣ್ಣ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಒಬಳೇಶ್ ಮಾನವಿ ಮಾಡಿದರು.
ಆದರೆ ಇದಕ್ಕೆ ಒಪ್ಪದ ತಹಶೀಲ್ದಾರ್ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಅವಕಾಶ ನೀಡುವುದಿಲ್ಲ. ಬಟ್ಟೆ ಬ್ಯಾಗುಗಳನ್ನು ಬಳಕೆ ಮಾಡಿ, ಇಲ್ಲವಾದಲ್ಲಿ ಗ್ರಾಹಕರೆ ಬಟ್ಟೆ ಚೀಲಗಳನ್ನು ತರುವಂತೆ ತಿಳಿಸಿ ಎಂದು ಹೇಳಿದರು.
ಪಟ್ಟಣ ಪಂಚಾಯ್ತಿ ಆರೋಗ್ಯ ಅಧಿಕಾರಿ ಲತಾ, ಪಟ್ಟಣದ ಕಿರಾಣಿ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.