ಲೋಕದರ್ಶನ ವರದಿ
ಕೂಡ್ಲಿಗಿ 07: ಜನ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ವರ್ಗಕ್ಕೆ ಶೇ 7ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅಖಿಲ ಕನರ್ಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಘಟಕದಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮುಖಾಂತರ ರಾಜ್ಯಪಾಲ ಹಾಗೂ ಮುಖ್ಯ ಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
2011ರ ಜನ ಗಣತಿಯ ಪ್ರಕಾರ ಒಟ್ಟಾರೆ ಜನ ಸಂಖ್ಯೆಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ವರ್ಗದವರ ಸಂಖ್ಯೆ ಶೇ 6.95ರಷ್ಟಿದ್ದು, ಪ್ರಸ್ತುತ ಈ ಸಂಖ್ಯೆ ಶೇ 7ಕ್ಕೂ ಹೆಚ್ಚಾಗಿದೆ.ಕರ್ನಾಟಕದಲ್ಲಿ ಈಗ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಬಡ್ತಿ ಸೇರಿ) ಮೀಸಲಾತಿ ಶೇ 3ರಷ್ಟು ಮಾತ್ರ ಇದೆ. ಇದರಿಂದ ಪರಿಶಿಷ್ಟ ವರ್ಗದವರಿಗೆ ಅನೇಕ ವರ್ಷಗಳಿಂದ ಅನ್ಯಾಯವಾಗುತ್ತಿದ್ದು, ಈಗಿರುವ ಮೀಸಲಾತಿಯನ್ನು 7ಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದು, ಪರಿಶಿಷ್ಟ ವರ್ಗದವರ ವಸತಿ, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸಮಸ್ಯೆಗಳಾತ್ತ ಗಮನ ಹರಿಸಿ ಮುಖ್ಯ ವಾಹಿನಿಗೆ ತರಲು ಸಕರ್ಾರ ಪ್ರತ್ಯೇಕ ಪರಿಶಿಷ್ಟ ಪಂಗಡ ಇಲಾಖೆಯನ್ನು ಜಾರಿ ಮಾಡಲು ಕೋರಿದ್ದಾರೆ.
ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿನ ಹೆಸರುಗಳನ್ನು ಬಳಸಿಕೊಂಡು ಕೆಲವು ಮುಂದುವರಿದ ವರ್ಗದವರು ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ಪಡೆದು, ಮೀಸಲಾತಿ ಸೌಲಭ್ಯ ಪಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅದ್ದರಿಂದ ರಾಜ್ಯ ಸಕರ್ಾರ ಅರ್ಹರಲ್ಲದವರು ಜಾತಿ ಪ್ರಮಾಣ ಪತ್ರ ಪಡೆಯುವುದನ್ನು ಕೂಡಲೇ ತಡೆಯಬೇಕು ಹಾಗೂ ಈಗಾಗಲೇ ಪ್ರಮಾಣ ಪತ್ರ ಪಡೆದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಮುಖಂಡರಾದ ಸಿ.ಬಿ. ಜಯರಾಂ ನಾಯಕ, ಸಣ್ಣ ಕೊತ್ಲಪ್ಪ, ಕಾವಲ್ಲಿ ಶಿವಪ್ಪ ನಾಯಕ, ಜಿ. ನಾಗಮಣಿ, ಬಿ. ಭೀಮೇಶ್, ಪಿ. ಮಂಜುನಾಥ ನಾಯಕ, ಸುರೇಶ್, ಜಿ. ಸತೀಶ, ಬಿ. ಶಿವಮೂತರ್ಿ, ರಾಘವೇಂದ್ರ, ಸಿ.ಬಿ. ಸಿದ್ದೇಶ್, ಕೊಟ್ರೇಶ್, ವೆಂಕಟೇಶ್, ನಾಗರಾಜ, ಶ್ರೀಕಾಂತ್, ಈಶಪ್ಪ, ನಿಂಗಪ್ಪ, ಹರೀಶ್ ಸೇರಿದಂತೆ ಅನೇಕರು ಇದ್ದರು. ಗ್ರೇಡ್-2 ತಹಶೀಲ್ದಾರ್ ಆರುಂದತಿ ನಾಗಾವಿ ಮನವಿ ಪತ್ರ ಸ್ವೀಕಾರ ಮಾಡಿದರು.