2020ರ ವಿಶ್ವ ಕಪ್ ಕ್ವಾಲಿಫೈಯರ್ಸ್ ಮುಂದೂಡಿಕೆಗೆ ಕೊನ್ಮೆಬೋಲ್ ಮನವಿ

ಲುಕ್, ಮಾ 20, ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ವಿಶ್ವ ಕಪ್ 2022ರ ಕ್ವಾಲಿಫೈಯರ್ಸ್ ಟೂರ್ನಿಯನ್ನು ಮುಂದೂಡುವಂತೆ ದಕ್ಷಿಣ ಅಮೆರಿಕ ಫುಟ್ಬಾಲ್ ಕಾನ್ ಫೆಡರೇಷನ್ (ಕೊನ್ಮೆಬೋಲ್) ಶುಕ್ರವಾರ ಫಿಫಾಗೆ ಮನವಿ ಮಾಡಿದೆ.ಕತಾರ್ ನಲ್ಲಿ ನಡೆಯಲಿರುವ ಫಿಫಾ ವಿಶ್ವ ಕಪ್ 2022ರ ಟೂರ್ನಿಗೆ ಆಯೋಜನೆಯಾಗಿರುವ ದಕ್ಷಿಣ ಅಮೆರಿಕ ಕ್ವಾಲಿಫೈಯರ್ಸ್ ಟೂರ್ನಿಯನ್ನು 2020ರ ಸೆಪ್ಟೆಂಬರ್ ಗೆ ಮುಂದೂಡುವಂತೆ ಫಿಫಾಗೆ ಮನವಿ ಮಾಡಲಾಗಿದೆ. ಕೊನ್ಮೆಬೋಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.22ನೇ ಆವೃತ್ತಿಯ ವಿಶ್ವ ಕಪ್ ಟೂರ್ನಿ ಕತಾರ್ ನಲ್ಲಿ 2022ರ ನವೆಂಬರ್ 21ರಿಂದ ಡಿಸೆಂಬರ್ 18ರವರೆಗೆ ನಿಗದಿಯಾಗಿದೆ. ಕೊರೊನಾ ವೈರಸ್ ಭೀತಿಯಿಂದಾಗಿ ಈಗಾಗಲೇ ಹಲವು ಟೂರ್ನಿಗಳನ್ನು ರದ್ದುಪಡಿಸಲಾಗಿದೆ.